Skip to main content


ಬರಲಿದೆ 50 ಎಂಬಿಪಿಎಸ್‌ ಬ್ರಾಡ್‌ಬ್ಯಾಂಡ್‌

ಸಾಲದ ಸುಳಿಯಲ್ಲಿ ಸಿಲುಕಿರುವ ದೂರಸಂಪರ್ಕ ವಲಯದ ಪುನಶ್ಚೇತನಕ್ಕಾಗಿ ತರಂಗಗುಚ್ಛ ಶುಲ್ಕವೂ ಸೇರಿದಂತೆ ತೆರಿಗೆಗಳ ಸರಳೀಕರಣಕ್ಕೆ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ. 2022ರ ವೇಳೆಗೆ ದೂರಸಂಪರ್ಕ ವಲಯದಲ್ಲಿ 40 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ, ಕನಿಷ್ಠ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ, 5ಜಿ ಸೇವೆಗಳು ಸೇರಿದಂತೆ ನೂತನ ಟೆಲಿಕಾಂ ಕರಡು ನೀತಿಯೊಂದನ್ನು ಸಿದ್ಧಪಡಿಸಿದೆ. 'ರಾಷ್ಟ್ರೀಯ ಡಿಜಿಟಲ್‌ ಸಂಪರ್ಕ ನೀತಿ 2018' ಎಂದು ಈ ಕರಡು ನೀತಿಗೆ ಹೆಸರಿಡಲಾಗಿದ್ದು, ಮಂಗಳವಾರ ಇದನ್ನು ಬಹಿರಂಗಪಡಿಸಲಾಗಿದೆ. ಡಿಜಿಟಲ್‌ ಸಂವಹನ ಕ್ಷೇತ್ರದಲ್ಲಿ 2022ರ ವೇಳೆಗೆ 10,000 ಕೋಟಿ ಡಾಲರ್‌ ಬಂಡವಾಳ ಆಕರ್ಷಿಸುವ ಉದ್ದೇಶವನ್ನು ಇದು ಹೊಂದಿದೆ. ಇದಕ್ಕಾಗಿ ನಿಯಂತ್ರಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರಕಾರ ಮುಂದಾಗಿದೆ.

short by Sp / more at NewsPoint

Comments