Skip to main content


ಭೀಮ್ ಆಯಪ್‌ನಲ್ಲಿ ಕೇವಲ ಒಂದು ರೂ. ವಹಿವಾಟು ನಡೆಸಿ 51ರೂ.ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ....?

ಈ ಆಯಪ್ ಗ್ರಾಹಕರಿಗಾಗಿ ಹೊಸ ಕ್ಯಾಷ್‌ಬ್ಯಾಕ್ ಯೋಜನೆಯನ್ನು ಪರಿಚಯಿಸಿದ್ದು,ಬಳಕೆದಾರರು ತಿಂಗಳಿಗೆ 750 ರೂ.ವರೆಗೂ ಕ್ಯಾಷ್‌ಬ್ಯಾಕ್ ಪಡೆಯಬಹುದಾಗಿದೆ. ಈ ಯೋಜನೆಯು ಹೊಸದಾಗಿ ಭೀಮ್ ಆಯಪ್ ಡೌನ್‌ಲೋಡ್ ಮಾಡಿಕೊಳ್ಳುವವರಿಗೆ ಸೀಮಿತವಾಗಿದೆ. ಹಾಗೆಂದು ಆಯಪ್‌ನ್ನು ರೀ-ಇನ್‌ಸ್ಟಾಲ್ ಮಾಡಿಕೊಂಡರೆ ಹೊಸ ಭೀಮ್ ಬಳಕೆದಾರರಾಗುವುದಿಲ್ಲ ಎನ್ನುವುದು ನೆನಪಿರಲಿ. ಆಸಕ್ತಿಯ ವಿಷಯವೆಂದರೆ ಕ್ಯಾಷ್‌ಬ್ಯಾಕ್ ಪಡೆಯಲು ಕನಿಷ್ಠ ಮಿತಿಯನ್ನು ಹೇರಲಾಗಿಲ್ಲ. ಮೊದಲ ವಹಿವಾಟನ್ನು,ಅದು ಕೇವಲ ಒಂದು ರೂ.ನದ್ದಾದರೂ ಸರಿ,ಪೂರ್ಣಗೊಳಿಸಿದರೆ 51 ರೂ.ಗಳ ಕ್ಯಾಷ್‌ಬ್ಯಾಕ್ ದೊರೆಯುತ್ತದೆ. ಭೀಮ್ ಮತ್ತು ಬ್ಯಾಂಕ್ ಯುಪಿಐ ಆಯಪ್ ಗಳಿಗಾಗಿರುವ ವಿಶಿಷ್ಟ ವಹಿವಾಟು ಯೋಜನೆಯಡಿ ಮುಂದಿನ ಗರಿಷ್ಠ 20 ವಹಿವಾಟುಗಳಿಗೆ(ಒಂದು ತಿಂಗಳ ಅವಧಿಯಲ್ಲಿ),ಪ್ರತಿ ವಹಿವಾಟು ಕನಿಷ್ಠ 100 ರೂ.ಗಳಾಗಿದ್ದರೆ ಮತ್ತು ಪ್ರತಿ ಬಾರಿಯೂ ಹೊಸ ವ್ಯಕ್ತಿಯೊಂದಿಗೆ ವಹಿವಾಟು ನಡೆಸಿದ್ದರೆ ಪ್ರತಿ ವಹಿವಾಟಿಗೂ 25 ರೂ.ಗಳಂತೆ ಗರಿಷ್ಠ 500 ರೂ.ಕ್ಯಾಷ್‌ಬ್ಯಾಕ್ ಲಭಿಸುತ್ತದೆ. ವಹಿವಾಟುಗಳು ಯಾವುದೇ ವಿಪಿಎ(ವರ್ಚುವಲ್ ಪೇಮೆಂಟ್ ಅಡ್ರೆಸ್)/ಯುಪಿಐ ಐಡಿ,ಬ್ಯಾಂಕ್‌ಖಾತೆ....ಅಷ್ಟೇ ಏಕೆ,ಮೊಬೈಲ್ ಸಂಖ್ಯೆಗೂ ಆಗಿರಬಹುದು.       

short by Pawan / more at Varthabharathi

Comments