ಕಳೆದ ತಿಂಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮೇಲೆ ದಾಖಲೆಯನ್ನು ಬರೆದಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳವಾಗಿ ಗ್ರಾಹಕರು ಹೈರಾಣಾಗಿದ್ದಾರೆ. ಬೆಲೆ ಏರಿಕೆಯಾಗಿದ್ರೂ ಕೂಡ ಕಳೆದ 6 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿಲ್ಲ. ದೈನಂದಿನ ಬೆಲೆ ಪರಿಷ್ಕರಣೆ ನೀತಿ ಜಾರಿಗೆ ಬಂದಾಗಿನಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣದಿಂದ ತೈಲ ಬೆಲೆಯನ್ನು 6 ದಿನಗಳಿಂದ ಬದಲಿಸಿಲ್ಲ ಎನ್ನಲಾಗಿದೆ.
short by NP / more at Kannada Dunia
Comments
Post a Comment