Skip to main content


ಮರ್ಸಿಡಿಸ್ ಬೆಂಝ್ ಎಎಂಜಿ ಇ 63 ಎಸ್‌ 4ಮ್ಯಾಟಿಕ್‌ ಪ್ಲಸ್‌ ಬಿಡುಗಡೆ

ದೇಶದ ಅತಿದೊಡ್ಡ ಲಕ್ಷುರಿ ಕಾರು ಉತ್ಪಾದಕ ಸಂಸ್ಥೆ ಮರ್ಸಿಡಿಸ್‌ ಬೆಂಝ್ ಎಎಂಜಿ ಪರ್ಫಾಮೆನ್ಸ್ ಸರಣಿಯಲ್ಲಿ ಎಎಂಜಿ ಇ 63 ಎಸ್‌ 4ಮ್ಯಾಟಿಕ್‌ ಪ್ಲಸ್‌ ಅನ್ನು ಶುಕ್ರವಾರ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿದ್ದ1.5 ಕೋಟಿ ರೂ. (ಎಕ್ಸ್ ಶೋರೂಂ) ಬೆಲೆ ಹೊಂದಿದೆ. ಎಎಂಜಿ ಇ 63 ಎಸ್‌ 4ಮ್ಯಾಟಿಕ್‌ ಪ್ಲಸ್‌ 4.0 ಲೀ. ಟ್ವಿನ್‌ ಟರ್ಬೋ ವಿ8 ಇಂಜಿನ್ ಹೊಂದಿದ್ದು, 612 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಎಎಂಜಿ ಇ-ಕ್ಲಾಸ್‌ ಸರಣಿಯಲ್ಲಿ ಈ ಕಾರು ಅತಿ ವೇಗದ ಮಾದರಿಯಾಗಿದ್ದು, ಕೇವಲ 3.4 ಸೆಕೆಂಡ್‌ನಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಕಾರು ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್‌ ಇಂಡಿಯಾ ಎಂಡಿ ಮತ್ತು ಸಿಇಒ ರೋಲ್ಯಾಂಡ್‌ ಫೋಜರ್, ಎಎಂಜಿ ಇ 63 ಎಸ್‌ 4ಮ್ಯಾಟಿಕ್‌ ಪ್ಲಸ್‌ ಲಕ್ಷುರಿ ಪರ್ಫಾಮೆನ್ಸ್ ಸರಣಿಯಲ್ಲಿ ಅತ್ಯುತ್ತಮ ದರ್ಜೆಯದ್ದಾಗಿದ್ದು, ಅಧಿಕ ಶಕ್ತಿಶಾಲಿಯಾಗಿದೆ. ಜತೆಗೆ ದೇಶದ ಯುವಜನತೆಯನ್ನು ಗಮನದಲ್ಲಿಸಿರಿಕೊಂಡು ಈ ಕಾರನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.      

short by Pawan / more at Vijayakarnataka

Comments