Skip to main content


ಮುಂದಿನ ಚಿತ್ರಕ್ಕೆ 65 ಕೋಟಿ ಸಂಭಾವನೆಯಂತೆ ರಜಿನಿಗೆ..?

ಹೌದು, ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದ್ರಲ್ಲಿ ಎರಡು ಮಾತಿಲ್ಲ. ಸಧ್ಯ ಇವರ ಅಭಿನಯದ ಎರಡು ಸಿನಿಮಾಗಳು ಹೆಸರು ಮಾಡುತ್ತಿವೆ. ರೋಬೊ ೨.೦ ಹಾಗೂ ಕಾಲಾ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದ್ದು, ಇದೀಗ ಎರಡು ಸಿನಿಮಾಗಳ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಕಾಲಾ ಚಿತ್ರದ ಮೇಲಿನ ನಿರೀಕ್ಷೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಇದರ ಬೆನ್ನಲ್ಲೇ ರಜಿನಿ ಮತ್ತೊಂದು ಸಿನಿಮಾ ಮಾಡೋ ಚಿಂತನೆಯಲಿದ್ದಾರಂತೆ. ರಜನಿ ವೃತ್ತಿ ಬದುಕಿನ ೧೬೫ನೇ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಅವರು ಸುಮಾರು ೬೫ ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಗುಸು ಗುಸು ನಡೆಯುತ್ತಿದೆ. ಈ ಒಂದು ಚಿತ್ರಕ್ಕಾಗಿಯೇ ರಜನಿ ೪೦ ದಿನಗಳ ಕಾಲ್‌ಶೀಟ್ ಮೀಸಲಿಟ್ಟಿದ್ದಾರಂತೆ. ಅನಿರುದ್ಧ ರವಿಚಂದರ್ ಈ ಚಿತ್ರದ ಹಾಡುಗಳನ್ನು ಸಂಯೋಜನೆ ಮಾಡುತ್ತಿದ್ದಾರೆ ಅನ್ನೋದು ಸದ್ಯದ ಮಾಹಿತಿ.          

short by Pawan / more at Balkani News

Comments