Skip to main content


ಹೊಸತನಗಳ "ಒನ್ ಪ್ಲಸ್ 6"

ಒನ್ ಪ್ಲಸ್ ಕಂಪನಿಯು ಹೊಸ ಗುಣವೈಶಿಷ್ಟ್ಯಗಳಿರುವ 'ಒನ್ ಪ್ಲಸ್ 6' ಫೋನ್ ಅನ್ನು ಗುರುವಾರ ಬಿಡುಗಡೆ ಮಾಡಿದೆ. 'ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಬದಲಾವಣೆಗಳನ್ನು ತರಲಾಗಿದೆ. ಮೊಬೈಲ್ ಹಿಂಬದಿಗೂ ಗ್ಲಾಸ್ ಬಳಸಲಾಗಿದೆ. ಈ ಹಿಂದಿನ ಎಲ್ಲಾ ಫೋನ್‌ಗಳಲ್ಲಿ ಸೆರಾಮಿಕ್ ಬಳಸಲಾಗಿತ್ತು' ಎಂದು ಕಂಪನಿಯ ಜಾಗತಿಕ ಮಾರುಕಟ್ಟೆಯ ಮುಖ್ಯಸ್ಥ ಕೈಲ್ ಕಿಯಾಂಗ್ ಅವರು ಇಲ್ಲಿ ನಡೆದ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು. 6.28 ಇಂಚಿನ 19:9 ಅಮೋಲ್ಡ್ ಫುಲ್ ಆಪ್ಟಿಕ್ ಡಿಸ್‍ಪ್ಲೇ ಹೊಂದಿರುವ ಒನ್ ಪ್ಲಸ್ 6, ಒನ್ ಪ್ಲಸ್ ಬಿಡುಗಡೆ ಮಾಡಿರುವ ಫೋನ್‌ಗಳಲ್ಲಿಯೇ ಅತಿ ದೊಡ್ಡ ಸ್ಕ್ರೀನ್ ಹೊಂದಿರಲಿದೆ. ಅತ್ಯುತ್ತಮ ವೀಕ್ಷಣೆ ಅನುಭವವನ್ನು ನೀಡುತ್ತದೆ.

short by Sp / read more at DailyHunt


Comments