Skip to main content


ಎಷ್ಟು ಗೊತ್ತಾ ಟಗರು ಚಿತ್ರದ 75 ದಿನದ ಒಟ್ಟು ಕಲೆಕ್ಷನ್..!

ಟಗರು ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೆ ಪಕ್ಕದ ಚಿತ್ರರಂಗಗಳು ಸಹ ಕನ್ನಡ ಚಲನಚಿತ್ರ ರಂಗದತ್ತ ತಿರುಗು ನೋಡುವಂತೆ ಮಾಡಿದಂತಹ ಚಿತ್ರ. ಸೆಂಚುರಿ ಸ್ಟಾರ್ ಶಿವಣ್ಣ, ಭಾವನಾ, ಮಾನ್ವಿತಾ ಹರೀಶ್, ಧನಂಜಯ್ ಮತ್ತು ವಸಿಷ್ಠ ಸಿಂಹ ಅಭಿನಯಿಸಿದ್ದ ಟಗರು ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿ ತೆರೆಗೆ ಬಂದಿತ್ತು. ಚಿತ್ರಕ್ಕೆ ಸುಖ ಸೂರಿಯವರ ನಿರ್ದೇಶನವಿದ್ದು ಶಿವಣ್ಣ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿತ್ತು. ಇನ್ನು ಇದೀಗ ಟಗರು ಚಿತ್ರ ಇತ್ತೀಚೆಗಷ್ಟೇ ಕರ್ನಾಟಕದಾದ್ಯಂತ ಸುಮಾರು 30 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 75 ದಿನಗಳನ್ನು ಪೂರೈಸಿದೆ. ಈ ಮೂಲಕ ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಚಿತ್ರ ಎಂಬ ಹೆಗ್ಗಳಿಕೆಗೆ ಟಗರು ಚಿತ್ರ ಪಾತ್ರವಾಗಿದೆ. ಇನ್ನು 75 ದಿನಗಳನ್ನು ಪೂರೈಸಿ ಶತ ದಿನದತ್ತ ಮುನ್ನುಗ್ಗುತ್ತಿರುವ ಟಗರು ಚಿತ್ರದ ಕಲೆಕ್ಷನ್ ಎಷ್ಟು ಎಂಬುದು ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಮೂಲಗಳ ಪ್ರಕಾರ ಟಗರು ಚಿತ್ರದ 75 ದಿನಗಳ ಒಟ್ಟು ಕಲೆಕ್ಷನ್ ಸುಮಾರು 35 ಕ್ಕೂ ಹೆಚ್ಚು ಕೋಟಿ ರೂಪಾಯಿಗಳು.   

short by Pawan!

Comments