Skip to main content


ಮೇ 8 ರಂದು ಸೋನಮ್ ಕಪೂರ್-ಅಹುಜಾ ಮದುವೆ

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಮದುವೆಯ ದಿನಾಂಕ ಫಿಕ್ಸ್ ಆಗಿದ್ದು, ಮೇ. 8 ರಂದು ಮದುವೆ ನಡೆಯಲಿದೆ ಎಂದು ಕಪೂರ್ ಕುಟುಂಬ ಪ್ರಕಟಿಸಿದೆ. ಈಗಾಗಲೇ ಮದುವೆಗೆ ಸಿದ್ದತೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಹಲವು ವರ್ಷಗಳ ಗೆಳೆಯ ಆನಂದ್ ಅಹುಜಾ ಅವರನ್ನು ಸೋನಮ್ ಕಪೂರ್ ವರಿಸಲಿದ್ದಾರೆ. ಕುಟುಂಬದ ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.            

short by Pawan / more at Kannada News Now

Comments