Skip to main content


ಫೋರ್ಬ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಪಿಎಂ ಮೋದಿಗೆ 9ನೇ ಸ್ಥಾನ

ಹಾಲಿ ವರ್ಷಕ್ಕಾಗಿನ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸಿದೆ. ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಝಕರ್‌ಬರ್ಗ್‌ (13ನೇ ಸ್ಥಾನ), ಯುನೈಟೆಡ್‌ ಕಿಂಗ್‌ಡಮ್‌ ಪ್ರಧಾನಿ ಥೆರೇಸಾ ಮೇ (14),  ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ (15) ಮತ್ತು ಆ್ಯಪಲ್‌ ಸಿಇಒ ಟಿಮ್‌ ಕುಕ್‌ (24ನೇ ಸ್ಥಾನ)ಗಿಂತ ಅಗ್ರ ಸ್ಥಾನದಲ್ಲಿದ್ದಾರೆ. ಇದುವರೆಗೆ ಮೊದಲ ಸ್ಥಾನದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸ್ಥಾನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಇದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಲಿ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಮೊದಲ ಪಂಕ್ತಿಯ ಹತ್ತು ಸ್ಥಾನದಲ್ಲಿರುವವರು ವಿಶ್ವವನ್ನೇ ಬದಲಾ ಯಿಸ ಬಲ್ಲವರು ಎಂದು ಫೋರ್ಬ್ಸ್ ಹೇಳಿದೆ.           

short by NP / more at Udayavani

Comments