Skip to main content


ಸಿಎಸ್‌ಕೆ ವಿಜಯೋತ್ಸವ; ಆರಾಧ್ಯ ದೈವ ಧೋನಿ ಕಾಲಿಗೆ ಬಿದ್ದ ಅಭಿಮಾನಿ!

'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅತಿ ಹೆಚ್ಚು ಆರಾಧಿಸುತ್ತಿರುವ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ. ಇದಕ್ಕೆ ದೇಶದಲ್ಲಿ ಮಹಿಗಿರುವ ಜನಪ್ರಿಯತೆಯೇ ಸಾಕ್ಷಿ. ತಮ್ಮ ತಾಳ್ಮೆಯ ವ್ಯಕ್ತಿತ್ವದಿಂದ ಜನರ ಪ್ರೀತಿಗೆ ಪಾತ್ರವಾಗಿರುವ ಧೋನಿ ಅವರನ್ನು ಆರಾಧ್ಯ ದೈವದ ರೂಪದಲ್ಲಿ ಕೊಂಡಾಡಲಾಗುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪುಣೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಅಭಿಮಾನಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಅವರ ಕಾಲಿಗೆ ಬಿದ್ದಿದ್ದಾರೆ. ವಿನ್ನಿಂಗ್ ಶಾಟ್ ಬಾರಿಸಿದ ಬೆನ್ನಲ್ಲೇ ಸಿಎಸ್‌ಕೆ ವಿಜಯೋತ್ಸವದ ವೇಳೆಯಲ್ಲಿ ಭದ್ರತಾ ಕೋಟೆಯನ್ನು ಭೇದಿಸಿ ಬಂದ ಅಭಿಮಾನಿ ಮೈದಾನಕ್ಕೆ ನುಗ್ಗಿ ಧೋನಿ ಕಾಲಿಗೆರಗಿದರು. ಈ ಮುನ್ನ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳ ನಡುವೆಯು ಮೈದಾನಕ್ಕೆ ನುಗ್ಗಿ ಬಂದ ಅಭಿಮಾನಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.         

short by Prajwal / more at Vijaya Karnataka


Comments