Skip to main content


ರೀ ಕನ್ನಡದಲ್ಲಿ ಮಾತಾಡ್ರಿ ಎಂದವನಿಗೆ ಕೆ.ಎಲ್.ರಾಹುಲ್ ಕೊಟ್ಟ ಉತ್ತರವೇನು ಗೊತ್ತಾ..?

ಎಲ್ ರಾಹುಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುತ್ತಿದ್ದವರು ಆದರೆ ಈ ಬಾರಿ ಕಿಂಗ್ಸ್ ಇಲೆವೆನ್ ತಂಡವನ್ನ ಸೇರಿದ್ದಾರೆ ಸೇರಿರೋದು ಮಾತ್ರವಲ್ಲ ಬ್ಯಾಟ್ ಅನ್ನ ಸಹ ಸರಿಯಾಗೆ ಬೀಸುತ್ತಿದ್ದಾರೆ ಹೀಗಾಗೆ ಸೆಮಿಫೈನಲ್ಸ್ ಗೆ ಹೋಗುವ ಟೀಮ್ ಗಳ ಸಾಲಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಇದೆ. ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಗೆದ್ದಾಗ ಈ ಸಲಾ ಕಪ್ ನಮ್ದೆ ಅಂತ ಹೇಳುವ ಮೂಲಕ ಆರ್ ಸಿಬಿ ಅಭಿಮಾನಿಗಳ ಕಾಲ್ ಎಳೆದಿದ್ರು ರಾಹುಲ್ ಇಂತಹ ರಾಹುಲ್ ಕನ್ನಡದಲ್ಲಿ ಮಾತಡೋಕೆ ಹಿಂಜರಿತಾರಾ ಅಥವಾ ರಾಹುಲ್ ಗೆ ಕನ್ನಡ ಬರಲ್ವ ರಾಹುಲ್ ಕನ್ನಡದವರೇನಾ ಅನ್ನೋ ಎಲ್ಲ ಪ್ರಶ್ನೆಗೂ ಈ ಹಿಂದೆ ವಿಡಿಯೋವೊಂದರ ಮೂಲಕ ಉತ್ತರ ಕೊಟ್ಟಿದ್ದಾರೆ. ಫೇಸ್ ಬುಕ್ ಲೈವ್ ಬಂದ ಸಂದರ್ಭದಲ್ಲಿ ಕನ್ನಡ ಮಾತಾಡಿ ಎಂದವರಿಗೆ ರಾಹುಲ್ ಉತ್ತರ ನೀಡಿದ್ದಾರೆ ನಾನು ಯಾವಾಗ ಲೈವ್ ಗೆ ಬಂದ್ರು ಹೀಗೆ ಕೇಳ್ತೀರಾ ನಾನು‌ ಮಂಗಳೂರಿನಲ್ಲಿ ಹುಟ್ಟಿ ಬೆಳೆದವನು ನನ್ನ ಅಪ್ಪ ಅಮ್ಮ ಬೆಂಗಳೂರಿನಲ್ಲಿ ಇದ್ದಾರೆ ಯಾರೆಲ್ಲ ನನಗೆ ಕನ್ನಡ ಬರಲ್ಲ ಅಂತ ಅನ್ಕೊತ್ತಿರೋ ಅವರಿಗೆ ಹೇಳ್ತೀನಿ ನನಗೆ ಕನ್ನಡ ತುಂಬಾ ಚೆನ್ನಾಗೆ ಬರುತ್ತೆ ಅಂತ ಕನ್ನಡದಲ್ಲೇ ಅರ್ಥ ಆಗುವ ಹಾಗೆ ಬಿಡಿಸಿ ಹೇಳಿದ್ದಾರೆ.       

short by Prajwal / more at PublicTV

Comments