Skip to main content


ಮಕ್ಕಳ ಕಡೆಯಿಂದ ರವಿಚಂದ್ರನ್ ಅವರಿಗೆ ಸಿಕ್ಕಿದೆ ಸ್ಪೆಷಲ್ ಗಿಫ್ಟ್..

ಇದು ರವಿಚಂದ್ರನ್ ಅವರ ಹುಟ್ಟುಹಬ್ಬ. ಈ ದಿನ ರವಿಚಂದ್ರನ್ ತಮ್ಮ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಆಚರಿಸಿಕೊಂಡರು. ರಾಜ್ ಕುಮಾರ್ ರಸ್ತೆಯ ಅವರ ನಿವಾಸದ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಅಭಿಮಾನಿಗಳು ತಂದ ಕೇಕ್ ಕಟ್ ಮಾಡಿದರು. ಒಂದು ಕಡೆ ಅಭಿಮಾನಿಗಳ ಖುಷಿ ಆದ್ರೆ, ಮತ್ತೊಂದು ಕಡೆ ಮನೆಯಲ್ಲಿಯೂ ಕ್ರೇಜಿಸ್ಟಾರ್ ಬರ್ತ್ ಡೇ ಸೆಲೆಬ್ರೇಶನ್ ಜೋರಾಗಿದೆ. ಈ ಬಾರಿ ರವಿಚಂದ್ರನ್ ಅವರಿಗೆ ಅವರ ಮಕ್ಕಳ ಕಡೆಯಿಂದ ಎರಡು ವಿಶೇಷ ಉಡುಗೊರೆಗಳು ಸಿಕ್ಕಿವೆ. ರವಿಮಾಮನ ಪ್ರೀತಿಯ ಮಗಳು ಅಪ್ಪನಿಗಾಗಿ ಒಂದು ಸನ್ ಗ್ಲಾಸ್ ಕೊಟ್ಟಿದ್ದಾರೆ. ಜೊತೆಗೆ ಅವರ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ತಂದೆಗಾಗಿ ತಾವೇ ಒಂದು ಶಾರ್ಟ್ ಡಿಸೈನ್ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಆ ಶಾರ್ಟ್ ಮೇಲೆ 'ಕ್ರೇಜಿ ಸ್ಟಾರ್' ಎಂದು ಬರೆದಿದ್ದು ರವಿಚಂದ್ರನ್ ಒಳಗಿರುವ 'ಕ್ರೇಜಿ ಸ್ಟಾರ್' ಎದ್ದು ಬರಲಿ ಎಂಬ ಆಸೆಯಿಂದ ಈ ಗಿಫ್ಟ್ ಕೊಟ್ಟಿದ್ದಾರಂತೆ.    

short by Pawan / more at Filmibeat

Comments