Skip to main content


ಕಿಂಗ್ಸ್ ಇಲೆವೆನ್ ತಂಡದ ಆ್ಯಂಡ್ರೂ ಟೈ ಕಪ್ಪು ಪಟ್ಟಿ ಧರಿಸಿದ್ದೇಕೆ?

ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ 34 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದ್ದ ಆ್ಯಂಡ್ರೂ ಟೈ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರಿಗೆ ಸಿಗುವ ‘ಪರ್ಪಲ್’ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. ಟೈ ತನ್ನ ಈ ಪ್ರದರ್ಶನವನ್ನು ತನ್ನನ್ನು ಅಗಲಿದ ಅಜ್ಜಿಗೆ ಸಮರ್ಪಿಸಿದ್ದಲ್ಲದೆ ಕಪ್ಪು ಪಟ್ಟಿ ಧರಿಸಿ ಆಡಿದರು. ಟೈ ಪಂದ್ಯದ ವೇಳೆ ‘ಗ್ರಾಂಡ್‌ಮಾ’ ಎಂದು ಬರೆದಿದ್ದ ಕೈ ಪಟ್ಟಿಯನ್ನು ಧರಿಸಿ ಆಡಿದರು. ಪ್ರತಿ ವಿಕೆಟ್ ಪಡೆದ ಬಳಿಕ ಕೈಪಟ್ಟಿಗೆ ಮುತ್ತಿಟ್ಟರು. ಪರ್ಪಲ್ ಕ್ಯಾಪ್ ಸ್ವೀಕರಿಸುವ ವೇಳೆ ಟೈ ಭಾವೋದ್ವೇಗಕ್ಕೆ ಒಳಗಾದರು. ‘‘ಇಂದು ನಮ್ಮ ಅಜ್ಜಿ ನಮ್ಮನ್ನು ಅಗಲಿದ್ದಾರೆ. ನನ್ನ ಈ ಪ್ರದರ್ಶನವನ್ನು ಅಜ್ಜಿ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೆ ಸಮರ್ಪಿಸುವೆ. ಇದು ನನ್ನ ಪಾಲಿಗೆ ಭಾವೋದ್ವೇಗದ ಪಂದ್ಯ. ಎಷ್ಟೇ ಕಷ್ಟ ಎದುರಾದರೂ ನನಗೆ ಯಾವಾಗಲೂ ಕ್ರಿಕೆಟ್ ಮೇಲಿನ ಅಭಿಮಾನ ಕಡಿಮೆಯಾಗುವುದಿಲ್ಲ’’ ಎಂದು ಟೈ ಹೇಳಿದ್ದಾರೆ. ಟೈ ಸಾಹಸದ ಹೊರತಾಗಿಯೂ ಪಂಜಾಬ್ ತಂಡ ಈ ಪಂದ್ಯವನ್ನು 15 ರನ್‌ಗಳಿಂದ ಸೋತಿತ್ತು.         

short by Prajwal / more at Vartha Bharati

Comments