Skip to main content


ದರ್ಶನ್ ವಿಜಯಲಕ್ಷ್ಮಿ ಕೈ ಹಿಡಿದು ೧೫ ವರ್ಷ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿ 15 ವರ್ಷಯಾಗಿದೆ. ದರ್ಶನ್ ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದರು. 2000 ಮೇ 19 ರಂದು ದರ್ಶನ್ ಅವರು ವಿಜಯಲಕ್ಷ್ಮಿ ಜೊತೆ ಧರ್ಮಸ್ಥಳದಲ್ಲಿ ಸರಳವಾಗಿ ವಿವಾಹವಾಗಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗೆ ಮುದ್ದಾದ ಗಂಡು ಮಗ ವಿನೀಶ್ ಇದ್ದು, ವಿನೀಶ್ ತನ್ನ ತಂದೆ ಜೊತೆ ಐರಾವತ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾನೆ. ದರ್ಶನ್ ಹುಟ್ಟುಹಬ್ಬವನ್ನು ಆದ್ಧೂರಿಯಿಂದ ಆಚರಿಸುವ ಅಭಿಮಾನಿಗಳು ದರ್ಶನ್ ಅವರ ಮದುವೆ ವಾರ್ಷಿಕೋತ್ಸವೂ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತಮ್ಮ ಡಿ-ಬಾಸ್‍ಗೆ ಶುಭಾಶಯದ ಸುರಿಮಳೆ ಸುರಿಸಿದ್ದಾರೆ.  

short by Pawan / more at Balkani News

Comments