Skip to main content


ಮೋದಿಗೆ ದುಬಾರಿ ಕೋಟ್ ಕೊಟ್ಟಿದ್ಯಾರು? ಸಿ.ಎಂ. ತಿರುಗೇಟು

ವಂಚಕ ಉದ್ಯಮಿಯಿಂದ ದುಬಾರಿ ಗಿಫ್ಟ್ ಪಡೆದಿದ್ದಾರೆ ಎಂದು ಬಿ.ಜೆ.ಪಿ. ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಮಾಡಿರುವ ಆರೋಪಕ್ಕೆ ಸಿ.ಎಂ. ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಉದ್ಯಮಿ ವಿಜಯ್ ಈಶ್ವರನ್ ಯಾರೆಂದು ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಮಾತನಾಡಲು ಯಾವ ವಿಚಾರವೂ ಇಲ್ಲದ ಕಾರಣ, ವಾಚ್ ವಿಚಾರ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮೋದಿ ಅವರು ಹಾಕಿದ್ದ 15 ಲಕ್ಷ ರೂ. ಬೆಲೆಯ ಕೋಟ್ ಕೊಟ್ಟಿದ್ದು ಯಾರು? ಕೋಟ್ ಗೆ ಮೋದಿ ಟ್ಯಾಕ್ಸ್ ಕಟ್ಟಿದ್ದಾರಾ? ಮೊದಲು ಈ ಪ್ರಶ್ನೆಗಳಿಗೆ ಬಿ.ಜೆ.ಪಿ.ಯವರು ಉತ್ತರಿಸಲಿ ಎಂದು ಹೇಳಿದ್ದಾರೆ.

short by NP / more at Kannada Dunia

Comments