Skip to main content


ಬಿಜೆಪಿ ಮುಂದಿರುವ ಸಾಧ್ಯತೆಗಳು.!!!???

ಸಾಧ್ಯತೆ 1: ಬಹುಮತಕ್ಕೆ ಬಿಜೆಪಿಗೆ ಬೇಕಿರೋದು 8 ಸ್ಥಾನ. ಕಾಂಗ್ರೆಸ್ ಜೆಡಿಎಸ್ ಇತರೆ ಸೇರಿ - 118. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ಬಿಜೆಪಿಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಆಹ್ವಾನ ನೀಡುತ್ತಾರೆ. ಬಿಜೆಪಿ ಸರ್ಕಾರ ರಚಿಸಿ ರಾಜ್ಯಪಾಲರು ಬಹುಮತ ಸಾಬೀತಿಗೆ ಕೊಡುವ ಸುಮಾರು ಒಂದು ವಾರ ಕಾಲಾವಕಾಶದಲ್ಲಿ ಆಪರೇಷನ್ ನಡೆಸಿ ಜೆಡಿಎಸ್ ಮತ್ತು ಕಾಂಗ್ರೆಸ್ ನ 15 ಜನರ ಕೈಲಿ ರಾಜಿನಾಮೆ ಕೊಡಿಸಿದರೆ ಅಥವಾ 15 ಶಾಸಕರು ಬಹುಮತ ಸಾಬೀತು ಮಾಡುವಾಗ ಗೈರಾಗುವಂತೆ ನೋಡಿಕೊಂಡರೆ ಸ್ಥಾನದ ಸಂಖ್ಯೆ 207 ಆಗಿ ಬಹುಮತಕ್ಕೆ 104 ಸ್ಥಾನ ಸಾಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

ಸಾಧ್ಯತೆ 2: ಬಿಜೆಪಿ ಬಹುಮತ ಸಾಬೀತಿಗೆ ವಿಫಲವಾಗಿ ರಾಜ್ಯಪಾಲರು ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರೆ, ಬಿಜೆಪಿ ಆಪರೇಷನ್ ನಡೆಸಿ ಬಿಜೆಪಿ ಎದುರು ಪಕ್ಷದ 7 ಜನರನ್ನು ಸಭೆಗೆ ಗೈರಾಗುವಂತೆ ನೋಡಿಕೊಂಡರೆ ಅವರ ಸಂಖ್ಯಾ ಬಲ 111 ಕ್ಕೆ ಕುಸಿದು ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತಾರೆ. 

ಸಾಧ್ಯತೆ 3: ಜೆಡಿಎಸ್ ಕಾಂಗ್ರೆಸ್ ಇತರೆ ಪಕ್ಷಗಳಿಗೆ ಖಿಚಡಿ ಸರ್ಕಾರ ರಚನೆ ಮಾಡಲು ಬಿಟ್ಟು ಅವರ ಕಿತ್ತಾಟಗಳನ್ನು ನೋಡಿ ಜನ ರೋಸಿಹೋಗುವಂತೆ ಮಾಡಿ 2019 ರಲ್ಲಿ ಸರ್ಕಾರ ಉರುಳಿಸಿ ಅಥವಾ ಅದೇ ಬಿದ್ದುಹೋಗಲು ಬಿಟ್ಟು ಲೋಕಸಭಾ ಚುನಾವಣೆಯೊಟ್ಟಿಗೆ ರಾಜ್ಯದ ಚುನಾವಣೆಯೂ ನಡೆಯುವಂತೆ ನೋಡಿಕೊಂಡು ಗೆಲುವು ಸಾಧಿಸಿ ಅಧಿಕಾರ ಹಿಡಿದು 5 ವರ್ಷ ಸರ್ಕಾರ ನಡೆಸುವುದು.  

short by Pawan / more at All Indian News

Comments