Skip to main content


ಬಿಜೆಪಿಯೊಂದಿಗೆ ಮೈತ್ರಿ ಇಲ್ಲ- ಜೆಡಿಎಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತದೆ- ಎಚ್‌.ಡಿ.ದೇವೇಗೌಡ

ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮೈತ್ರಿ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ , ಜೆಡಿಎಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತದೆ ಎಂದರು. ಕಾಂಗ್ರೆಸ್ ನನ್ನನ್ನು ಅವಮಾನಿಸಿದೆ ಎಂದು ಮೋದಿ ಹೇಳಿದ್ದು ಅಕ್ಷರಶಃ ನಿಜ, ರಾಜಕೀಯ ಹಿನ್ನೆಲೆ ತಿಳಿದುಕೊಂಡು ಮಾತನಾಡುವ ಮೋದಿಯವರ ಬಗ್ಗೆ ನನಗೆ ಗೌರವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಿಂದ ನನ್ನ ಭಾವಚಿತ್ರ ಕಿತ್ತು ಹಾಕಿಸಿ ಅವಮಾನ ಮಾಡಿದ್ದರು. ಇಂಥ ವಿಷಯಗಳನ್ನು ಮೋದಿ ಜನರ ಗಮನಕ್ಕೆ ತಂದಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ನನ್ನ ಪರ ಮಾತನಾಡಿದರು ಎಂದು ಬಿಜೆಪಿ ಜತೆ ಕೈಜೋಡಿಸಲ್ಲ ಎಂದು ಹೇಳಿದರು.             

short by NP / more at Daijiworld247

Comments