Skip to main content


ಒಳ್ಳೆಯ ಮೀನೂಟ ಬೇಕು ಅಂದ್ರೆ ರಿಷಬ್ ಶೆಟ್ಟಿ ಹೇಳೋ ಜಾಗಕ್ಕೆ ಹೋಗಿ

ಮೀನೂಟ ಪ್ರಿಯರಿಗೆ ನಿರ್ದೇಶಕ ರಿಷಬ್ ಶೆಟ್ಟಿ ಒಂದು ಹೋಟೆಲ್ ವಿಳಾಸ ಸೂಚಿಸಿದ್ದಾರೆ. ಆದ್ರೆ, ಇದು ಇರೋದು ಬೆಂಗಳೂರು ಅಥವಾ ಮೈಸೂರಿನಲ್ಲಲ್ಲ. ಮೀನಿಗೆ ಖ್ಯಾತಿ ಪಡೆದಿರುವ ಮಂಗಳೂರಿನಲ್ಲಂತೆ. ಇತ್ತೀಚಿಗೆ ಮಂಗಳೂರಿನಲ್ಲಿ ಹೋಟೆಲ್ ವೊಂದರಲ್ಲಿ ಮೀನೂಟ ತಿಂದಿರುವ ರಿಷಬ್ ಶೆಟ್ಟಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ''ಒಳ್ಳೆಯ ಮೀನೂಟ ಬೇಕಂದ್ರೆ ಮಂಗಳೂರಿನ ಕಡೆ ಬರಬೇಕು. ಆದ್ರೆ ಮಂಗಳೂರಿನಲ್ಲಿ ಒಳ್ಳೆಯ ಮೀನೂಟ ಬೇಕಂದ್ರೆ ಒಂದ್ಸಲ ಬಿಜಾಯಿಯಲ್ಲಿರೋ Illadha VANAS ಹೋಟಲ್ಲಿಗೆ ಬನ್ನಿ. ನೀವು ಸುಮ್ಮನೆ ಆ ರೋಡಿನಲ್ಲಿ ಹೋದರೂ ಘಮ್ಮನೆ ಮೀನಿನ ವಾಸನೆ ಬರ್ತದೆ. ಸೀದಾ ಒಳಗೆ ಹೋಗಿ ಊಟ ಮಾಡಿದ್ರಿ ಅಂದ್ರೆ ಮುಗೀತು. ಮತ್ತೆ ಹೋಗಿ ಗೊತ್ತಿರೋರ್ಗೆಲ್ಲಾ ಹೇಳ್ತಿರಾ. ಈಗ ನಾನ್ ಹೇಳ್ತಿದ್ದಿನಲ್ಲಾ ಹಾಗೆ. ವ್ಹಾ, ಎಂಥ ಸೂಪರ್ರಾಗಿರೋ ಮೀನ್ ಮಾರ್ರೆ, ಲಾಯಕ್ಕಿತ್.. ಮಿಸ್ ಮಾಡದೇ, ಹೋಗಿ ಬನ್ನಿ'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.   

short by Pawan / more at Filmibeat