Skip to main content


ಬಾದಾಮಿಯಲ್ಲಿ ಸಿಎಂ ಪರ ಪ್ರಚಾರದ ಬಗ್ಗೆ ರಾಕಿಂಗ್​ ಸ್ಟಾರ್​ ಯಶ್​ ಹೇಳಿದ್ದೇನು?

ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಮತಯಾಚನೆ  ಮಾಡುವುದಕ್ಕೆ ನಾನು ಹೋಗುವುದಿಲ್ಲ. ಕಾರಣ ಈ ಬಾರಿಯ ಚುನಾವಣೆಯಲ್ಲಿ ಅದು ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಕಾರಣದಿಂದ. ಅಲ್ಲೆಲ್ಲಾ ರಾಜಕೀಯ ರಾಜಕೀಯವಾಗಿ ನಡೆಯಬೇಕು. ಜನ ಯಾರನ್ನು ಪ್ರೀತಿಸಿ ಗೆಲ್ಲಿಸುತ್ತಾರೋ ಅವರೇ ಆಯ್ಕೆ ಆಗುತ್ತಾರೆ ಅಂತ ನಟ ರಾಕಿಂಗ್​ ಸ್ಟಾರ್​ ಯಶ್​ ಹೇಳಿದ್ದಾರೆ. ಅವರು ಇಂದು ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲರ ರೋಡ್​ ಶೋ ಮೂಲಕ ಪ್ರಚಾರ ಮಾಡಿ ಮತ ಯಾಚಿಸಿದರು. ಇದೇ ವೇಳೆ ಅವರು ಮಾತನಾಡಿ ಸಚಿವ ಎಂ.ಬಿ. ಪಾಟೀಲ ಅವರು ನನ್ನ ಫ್ಯಾಮಿಲಿ ಫ್ರೆಂಡ್. ಹಾಗಾಗಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಅಷ್ಟೆ. ಇನ್ನು ಎರಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದರು. ಮುಂದೆ ಮಾನಪ್ಪ ವಜ್ಜಲ್ ಪರ ಹಾಗೂ ಮತ್ತಿಬ್ಬರು ಕರೆದಿದ್ದಾರೆ. ಅವರ ಪರ ಮತಯಾಚನೆಗೆ ನಾನು ಹೋಗುತ್ತಿದ್ದೇನೆ. ಯಾರು ಜನರ ಪರ ಇದ್ದಾರೊ ಅವರ ನಿಶ್ಚಿತವಾಗಿ ಗೆದ್ದೆ ಗೆಲ್ತಾರೆ ಎಂದು ಯಶ್ ಹೇಳಿದ್ದರು.        

short by Pawan / more at Kannada News Now

Comments