Skip to main content


ಅಮರ್ ಚಿತ್ರದಲ್ಲಿ ಅಮಿತಾಬ್, ರಜನಿ, ಶತ್ರುಘ್ನ ಸಿನ್ಹಾ

ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅಭಿನಯದ ಚಿತ್ರ 'ಅಮರ್' ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ಜೆಪಿ ನಗರದಲ್ಲಿನ ತಿರುಮಲಗಿರಿ ದೇವಸ್ಥಾನದಲ್ಲಿ ಸೋಮವಾರ ಚಿತ್ರಕ್ಕೆ ಪೂಜೆ ನಡೆಯಿತು. ಜೂನ್ 25ರಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಇನ್ನೊಂದು ಮಹಾಮುಹೂರ್ತವೂ ನಡೆಯಲಿದ್ದು ಅದಕ್ಕೆ ಬಿಗ್‌ಬಿ ಅಮಿತಾಬ್ ಬಚ್ಚನ್, ಶತ್ರುಘ್ನ ಸಿನ್ಹಾ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಸ್ಟಾರ್ ಚಿರಂಜೀವಿ, ಮೋಹನ್ ಲಾಲ್ ಅತಿಥಿಗಳು. ಜೊತೆಗೆ ಭಾರತೀಯ ಚಿತ್ರೋದ್ಯಮದ ದಿಗ್ಗಜರೇ ಭಾಗವಹಿಸುತ್ತಿದ್ದಾರಂತೆ. ಇವರೆಲ್ಲರೂ ನಟ ಅಂಬರೀಶ್ ಆಪ್ತ ಸ್ನೇಹಿತರು. ಅವರೆಲ್ಲರ ಜತೆಗೆ ಭಾರತೀಯ ಚಿತ್ರರಂಗದ ಒಟ್ಟು 30 ಮಂದಿ ನಟ-ನಟಿಯರು 'ಅಮರ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ಇಲ್ಲಿರುವ ಇಂಟರೆಸ್ಟಿಂಗ್ ಸಂಗತಿ.       

short by Pawan / more at Suvarna News

Comments