Skip to main content


ಪೈಲ್ವಾನ್ ಅಖಾಡಕ್ಕೆ ಕಾಲಿಟ್ಟ ಕಬೀರ್ ಸಿಂಗ್

ಹೆಬ್ಬುಲಿ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದ ಕಬೀರ್ ದುಹನ್ ಸಿಂಗ್ ಪೈಲ್ವಾನ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಬಾಡಿ ಟ್ರಾನ್ಸ್ ಫರ್ ಮೇಶನ್ ಗಾಗಿ 12 ವಾರಗಳ ವರ್ಕ್ ಔಟ್ ಚಾಲೆಂಜ್ ತೆಗೆದುಕೊಂಡು ಸಿಕ್ಸ್ ಪ್ಯಾಕ್ ಮಾಡಿದ್ದಾರೆ ಕಬೀರ್ ದುಹನ್ ಸಿಂಗ್. ಈಗಾಗಲೇ 11 ವಾರಗಳು ವರ್ಕ್ ಔಟ್ ಮಾಡಿರುವ ಕಬೀರ್ ಸಿಂಗ್ ತಮ್ಮ ದೇಹದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ನಾನು ನಿಮ್ಮ ಪರಿಶ್ರಮವನ್ನ ನಾನು ತಲುಪಲು ಸಾಧ್ಯವಿಲ್ಲ,ಮತ್ತೆ ನಿಮ್ಮ ಜೊತೆ ಸ್ಕ್ರೀನ್ ಸೇರ್ ಮಾಡಲು ಕಾಯುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ನಿರ್ದೇಶಕ ಕೃಷ್ಣ ಕೂಡ ಈ ಬಗ್ಗೆ ಕಮೆಂಟ್ ಮಾಡಿದ್ದು ನಿಮ್ಮ ಕಮಿಂಟ್ ಮೆಂಟ್ ಮೆಚ್ಚಲೇಬೇಕು ಎಂದಿದ್ದಾರೆ.    

short by Pawan / more at Filmibeat

Comments