Skip to main content


ಶ್ರೀಮನ್ನಾರಾಯಣ ಶೂಟಿಂಗ್ ಪ್ಲೇಸ್ ಬದಲು!

ರಕ್ಷಿತ್ ಶೆಟ್ಟಿ ಸದ್ಯ ಬೇಡಿಕೆ ನಟರಲ್ಲಿ ಒಬ್ಬರು. ಮೊದಲ ಸಿನಿಮಾದಲ್ಲೇ ಹಿಟ್ ಪಡೆದ ನಟನಿಗೆ ಕಿರಿಕ್ ಪಾರ್ಟಿ ಆದ ನಂತರ ಅವಕಾಶಗಳು ಸಾಲು ಸಾಲುಗಿ ಬಂದಿವೆ. ಚಾರ್ಲಿ, ಅವನೇ ಶ್ರೀಮನ್ನಾರಾಯಣ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಇವರ ಕೈಯಲ್ಲಿವೆ. ಈ ಬೆನ್ನಲ್ಲೇ ಅವನೇ ಶ್ರೀಮನ್ನಾರಾಯಣ ಸಿನಿಮಾದ ಶೂಟಿಂಗ್ ಪ್ಲೇಸ್ ಬದಲಾವಣೆಯಾಗಿದೆ. ಹೌದು, ಸಚಿನ್ ರವಿ ನಿರ್ದೇಶನದ ಈ ಚಿತ್ರ ಅವನೇ ಶ್ರೀಮನ್ನಾರಾಯಣ, ಈಗಾಗ್ಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ, ನಂತರ ಶೂಟಿಂಗನ್ನ ರಾಜಸ್ಥಾನದಲ್ಲಿ ಮಾಡಬೇಕೆಂದಿತ್ತು. ಆದ್ರೆ ಕಾರಣಾಂತರಗಳಿಂದ ಇದೀಗ ವಿಜಯಪುರದಲ್ಲಿ ಶೂಟಿಂಗ್ ಪ್ಲಾನ್ ಮಾಡಿದೆಯಂತೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಾಜಿ ಮನೋಹರ್, ಅಚ್ಯುತ್ ರಾವ್ ಸೇರಿ ಅನೇಕರು ತಾರ ಬಳಗವಿದೆ. ಪುಷ್ಕರ್ ಫಿಲ್ಮ್ಸ್, ಪರಮ್ವ ಸ್ಟುಡಿಯೋಸ್ ಹಾಗೂ ಶ್ರೀದೇವಿ ಎಂಟರ್ಪ್ರೈಸಸ್ ಜಂಟಿ ಸಹಯೋಗದಲ್ಲಿ ಚಿತ್ರವು ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕರಮ್ ಚಾವ್ಲಾ ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ!   

short by Prajwal / more at Balkani News

Comments