Skip to main content


ಯುವಕರಿಗೆ ಖುಷಿ ಸುದ್ದಿ: ಡೇಟಿಂಗ್ ಗೆ ಅವಕಾಶ ನೀಡ್ತಿದೆ ಫೇಸ್ಬುಕ್

ಸಾಮಾಜಿಕ  ಜಾಲತಾಣ ಫೇಸ್ಬುಕ್ ಡೇಟಿಂಗ್ ಗೆ ಸಂಬಂಧಿಸಿದ ಹೊಸ ಫೀಚರ್ ಶುರು ಮಾಡ್ತಿದೆ. ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್ಬರ್ಗ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೀರ್ಘಕಾಲದ ಸಂಗಾತಿಗಳನ್ನು ಹುಡುಕಲು ಈ ಡೇಟಿಂಗ್ ಫೀಚರ್ ನೆರವಾಗಲಿದೆ ಎಂದವರು ಹೇಳಿದ್ದಾರೆ.ಫೇಸ್ಬುಕ್ ನ ಈ ಹೊಸ ಫೀಚರ್ ಸಂಪೂರ್ಣ ಉಚಿತವಾಗಿರಲಿದೆ. ಹೊಸ ಫೀಚರ್ ನಲ್ಲಿ ಬಳಕೆದಾರರು ಹೊಸ ಪ್ರೊಫೈಲ್ ರಚಿಸಬಹುದು. ಅವ್ರ ನೆಟ್ವರ್ಕ್ ಸ್ನೇಹಿತರಿಗೆ ಕಾಣಿಸುವುದಿಲ್ಲ. ಬಳಕೆದಾರರ ಆಸಕ್ತಿ ಹಾಗೂ ಪ್ರೊಫೈಲ್ ಆಧಾರದ ಮೇಲೆ ಫೇಸ್ಬುಕ್ ಅದಕ್ಕೆ ಹೊಂದುವ ಸಂಗಾತಿಗಳಿಗೆ ಇವ್ರ ಪ್ರೊಫೈಲ್ ಕಳುಹಿಸಲಿದೆ.ಬಳಕೆದಾರರ ಡೇಟಾ ಹಾಗೂ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಫೀಚರ್ ಶುರು ಮಾಡ್ತಿರುವುದಾಗಿ ಫೇಸ್ಬುಕ್ ಹೇಳಿದೆ.

short by: Nithin / more at Kannadadunia

Comments