Skip to main content


ಸದ್ದಿಲ್ಲದೇ ರಾಜಾಹುಲಿಯ ಕುಚುಕು ಗೆಳೆಯನ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ತಾರೆಯರು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಸದ್ದಿಲ್ಲದೇ ಪಾದಾರ್ಪಣೆ ಮಾಡಲು ಸಿದ್ಧರಾಗುತ್ತಿದ್ದಾರೆ. ಈಗ ರಾಜಾಹುಲಿಯ ಕುಚುಕು ಗೆಳೆಯ ನಟ ಹರ್ಷವರ್ಧನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಾಹುಲಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಹರ್ಷವರ್ಧನ್ ಮಾಡೆಲ್ ಐಶ್ವರ್ಯ ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಭಾನುವಾರ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಮತ್ತು ಮಾಡೆಲ್ ಐಶ್ವರ್ಯ ಅವರ ನಿಶ್ಚಿತಾರ್ಥ ನೆರವೇರಿದೆ.    

short by Pawan / more at Public Tv


Comments