Skip to main content


ಮಯೂರಿ ಬಿಚ್ಚಿಟ್ಟ ರಹಸ್ಯ

ಮಯೂರಿ ಸದ್ಯ ಸಿಗ್ನೇಚರ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಮಾಜಿ ಸಿಎಂ ಮಗಳ ಪಾತ್ರ. ಈ ಪಾತ್ರದ ಸೂಕ್ಷ್ಮತೆಯ ಬಗ್ಗೆ ಮಾತನಾಡಿದ್ದಾರೆ ಮಯೂರಿ. 'ಸಾಮಾನ್ಯರಿಗೂ ಮತ್ತು ಮಾಜಿ ಮುಖ್ಯಮಂತ್ರಿಗಳ ಮಗಳ ಲೈಫ್‌ಸ್ಟೈಲ್‌ಗೂ ತುಂಬಾ ವ್ಯತ್ಯಾಸವಿದೆ. ಒಂದು ಹುಡುಗಿಯಾಗಿ ಅವಳಿಗೆ ತುಂಬಾ ಸ್ವಾತಂತ್ರ್ಯ ಸಿಗುವುದಿಲ್ಲ. ಆದರೆ, ಸವಲತ್ತುಗಳು ಹೆಚ್ಚಾಗಿ ಸಿಗುತ್ತವೆ. ಸ್ವಾತಂತ್ರ್ಯ ಮತ್ತು ಸವಲತ್ತುಗಳ ನಡುವಿನ ರೋಚಕ ಕಾಳವನ್ನು ಅವಳು ಯಾವಾಗಲೂ ಅನುಭವಿಸುತ್ತಲೇ ಇರುತ್ತಾಳೆ. ಸಿಗ್ನೇಚರ್‌ ಸಿನಿಮಾದಲ್ಲೂ ನನ್ನದು ಅದೇ ರೀತಿಯ ಪಾತ್ರ. ನಿಜಕ್ಕೂ ಹೊಸ ಬಗೆಯ ಪಾತ್ರ' ಅಂತಾರೆ. ಈ ಸಿನಿಮಾದ ಕಥೆಯೇ ಇಂಟ್ರಸ್ಟಿಂಗ್‌ ಆಗಿದೆ. ಈ ಚಿತ್ರದ ಮೂಲಕ ರಂಜಿತ್‌ ನಾಯಕನಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಬೇಬಿ ಮಾನ್ಯಾ, ಸುಧಾರಾಣಿ ಹೀಗೆ ಅನುಭವಿ ಕಲಾವಿದರ ತಂಡವೇ ಸಿನಿಮಾದಲ್ಲಿ ಇದೆ.        

short by Pawan / more at Vijayakarnataka


Comments