Skip to main content


ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿರುವ ರಾಧಿಕಾ ಯಾರು?

ಕರ್ನಾಟಕದ ರಾಜಕೀಯದಲ್ಲಿ ಏನೇನೋ ಬದಲಾವಣೆಯಾಗಿ ಹದಿನೈದು ದಿನದಲ್ಲಿ ಮೂವರು ಸಿಎಂ ಗಳನ್ನು ಕಾಣುವಂತಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವವರೇ ಬೇರೆ! ಕಳೆದೊಂದು ವಾರದಿಂದ ಕನ್ನಡದ ಪ್ರಖ್ಯಾತ ನಟಿ ರಾಧಿಕಾ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. 2000 ನೇ ಇಸವಿಯಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ರಾಧಿಕಾ 'ನಿನಗಾಗಿ' ಚಿತ್ರದಿಂದ ಕನ್ನಡಿಗರ ಮನಗೆದ್ದವರು. 2010 ರವರೆಗೂ ಅಷ್ಟೊಂದು ಸುದ್ದಿಯಲ್ಲಿಲ್ಲದ ರಾಧಿಕಾ, ಇದ್ದಕ್ಕಿದ್ದಂತೆ ಸುದ್ದಿಯಾದರು. "ಕರ್ನಾಟಕದ ಪ್ರಭಾವಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿಯೊಬ್ಬರೊಂದಿಗೆ ತನಗೆ 2006 ರಲ್ಲಿ ಮದುವೆಯಾಗಿದೆ.

ತಮಗೊಬ್ಬ ಮಗಳೂ ಇದ್ದಾಳೆ" ಎಂಬ ಶಾಕಿಂಗ್ ನ್ಯೂಸ್ ಅನ್ನು ರಾಧಿಕಾ ನೀಡಿದ್ದರು. ನಂತರ ಎಚ್ ಡಿ ಕುಮಾರಸ್ವಾಮಿ ಮತ್ತು ರಾಧಿಕಾ ಜೊತೆಗಿರುವ ಚಿತ್ರಗಳು ವೃತ್ತಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಇದೀಗ ಕಾಂಗ್ರೆಸ್ ಪಕ್ಷ ತನ್ನ ಬೆಂಬಲ ಜೆಡಿಎಸ್ ಗೆ ಎಂದು ಘಂಟಾಘೋಷವಾಗಿ ಘೋಷಿಸುತ್ತಿದ್ದಂತೆಯೇ ಜೆಡಿಎಸ್ ಪಾಳೇಯದಲ್ಲಿ ಚಟುವಟಿಕೆ ಗರಿಗೆದರಿದೆ. ಹೀಗಿರುವಾಗ ಒಂದಷ್ಟು ಕಿಲಾಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರಾಧಿಕಾ ಅವರನ್ನು ಟ್ರೋಲ್ ಮಾಡುವುದಕ್ಕೆ ತೊಡಗಿದ್ದಾರೆ. ಕರ್ನಾಟಕದ ರಾಜಕೀಯ ಬೆಳವಣಿಗೆಯ ನಂತರ ಇಂಥದೊಂದು ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. 'ನನ್ನ ಮಾಂಗಲ್ಯ ಉಳಿಸಿದ ಯಡಿಯೂರಪ್ಪನವರಿಗೆ ಧನ್ಯವಾದಗಳು' ಎಂದು ರಾಧಿಕಾ ಕಣ್ಣೀರಿಟ್ಟು ಹೇಳುತ್ತಿರುವ ಚಿತ್ರ ಅದು. ಇಂದಿರಾ ಕ್ಯಾಂಟೀನ್ ಅಲ್ಲ, ರಾಧಿಕಾ ಕ್ಯಾಂಟೀನ್. ಕರ್ನಾಟಕದಲ್ಲಿ ಜನಪ್ರಿಯತೆಗಳಿಸಿರುವ ಇಂದಿರಾ ಕ್ಯಾಂಟೀನ್ ಇನ್ನು ಮೇಲೆ ರಾಧಿಕಾ ಕ್ಯಾಂಟೀನ್ ಆಗಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಲೇವಡಿ ಮಾಡಲಾಗಿದೆ.     

short by Pawan / more at Oneindia

Comments