Skip to main content


ಎಂಎಸ್ ಧೋನಿ ರನ್ ಮಳೆ ಹರಿಸುತ್ತಿರುವುದು ಭಾರತಕ್ಕೆ ಧನಾತ್ಮಕ ಮುನ್ಸೂಚನೆ: ವಿರಾಟ್ ಕೊಹ್ಲಿ

ನಮ್ಮ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಭಾರತಕ್ಕೆ ಧನಾತ್ಮಕ ಮುನ್ಸೂಚನೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಪುಣೆಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ 23 ಎಸೆತಗಳಲ್ಲಿ 31 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಎಂಎಸ್ ಧೋನಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯದಲ್ಲಿ ಚೆನ್ನೈ ಚೆನ್ನಾಗಿ ಆಡಿದ್ದಾರೆ ಮತ್ತು ಅವರು ಈ ಪಂದ್ಯವನ್ನು ಗೆಲ್ಲಲು ಅರ್ಹರಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಆರ್ಸಿಬಿಯ ಹಾದಿ ದುರ್ಗಮವಾಗಿದೆ ಎಂದು ತಿಳಿದಿದೆ. ಫ್ಲೇ ಆಫ್ ಗೆ ಹೋಗಬೇಕಾದರೆ ನಾವು ಕನಿಷ್ಠ 4 ಪಂದ್ಯ ಅಥವಾ 5 ಪಂದ್ಯಗಳನ್ನು ಗೆಲ್ಲಬೇಕು. ನಾನು ಮುಂದಿನ ಪಂದ್ಯಗಳ ಬಗ್ಗೆ ಆಶಾವಾದದ ಭಾವನೆ ಇದೆ ಎಂದರು.   

short by Prajwal / more at Kannadaprabha

Comments