Skip to main content


ಪೆಟ್ರೋಲ್‌ ಬೆಲೆ ಇಳಿಸಲು ಕೇಂದ್ರದಿಂದ ಹೊಸ ಪ್ಲ್ಯಾನ್​​!!!

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಪೆಟ್ರೋಲ್‌ ಬೆಲೆ ನಿಯಂತ್ರಿಸಿ ಎಂದು ಎಲ್ಲೆಡೆಯಿಂದ ಕೂಗು ಕೇಳಿ ಬರುತ್ತಿದೆ. ಆ ಹಿನ್ನಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ತಂತ್ರವೊಂದನ್ನು ಹುಡುಕಿದ್ದು, ಅದರಂತೆ ತೈಲೋತ್ಪಾದಕರ ಮೇಲೆ ವಿಂಡ್‌ಫಾಲ್‌ ತೆರಿಗೆ (ಭಾರಿ ಲಾಭದ ಮೇಲಿನ ತೆರಿಗೆ) ವಿಧಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದಾಗ ಭಾರತದಲ್ಲಿ ತೈಲ ಸಂಸ್ಕರಣೆ ಮಾಡುವ ಕಂಪನಿಗಳಿಗೆ ದೊಡ್ಡ ಪ್ರಮಾಣದ ಲಾಭವಾಗುತ್ತದೆ. ಈ ಲಾಭಕ್ಕೆ ವಿಧಿಸುವ ತೆರಿಗೆಯೇ ವಿಂಡ್‌ಫಾಲ್‌ ತೆರಿಗೆ. ಇದು ಸೆಸ್‌ ರೂಪದಲ್ಲಿರುತ್ತದೆ. ಇದನ್ನು ವಿಧಿಸುವ ಮೂಲಕ ಸರ್ಕಾರಕ್ಕೆ ಹರಿದುಬರುವ ಹಣವನ್ನು ಚಿಲ್ಲರೆ ತೈಲ ಮಾರಾಟಗಾರರಿಗೆ ನೀಡಲಾಗುತ್ತದೆ. ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟ ಮಾಡುವಂತೆ ನೋಡಿಕೊಳ್ಳಲಾಗುತ್ತದೆ. 

ಅದರ ಜೊತೆಗೆ, ತೈಲದ ಮೇಲಿನ ಅಬಕಾರಿ ಸುಂಕವನ್ನೂ ಕೊಂಚ ಕಡಿಮೆ ಮಾಡಿ ಗ್ರಾಹಕರಿಗೆ ತಕ್ಷಣಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆಯಾಗುವಂತೆ ನೋಡಿಕೊಳ್ಳುವ ಬಗ್ಗೆಯೂ ಯೋಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ರಾಜ್ಯ ಸರ್ಕಾರಗಳು ಕೂಡ ತೈಲೋತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಮತ್ತು ವ್ಯಾಟ್‌ ಇಳಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಲಿದೆ.      

short by Pawan / more at Bp9news

Comments