Skip to main content


ಕರ್ನಾಟಕ ಚುನಾವಣೆ ಪ್ರಯುಕ್ತ ಪೆಟ್ರೋಲ್‌, ಡೀಸಿಲ್‌ ಬೆಲೆ ನಿಶ್ಚಲ?

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 2 ಡಾಲರ್‌ ಏರಿರುವ ಹೊರತಾಗಿಯೂ ಭಾರತೀಯ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್‌ ಮತ್ತು  ಡೀಸಿಲ್‌ ಬೆಲೆಗಳ ಪರಿಷ್ಕರಣೆಯನ್ನು ನಿಲ್ಲಿಸಿವೆ. ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ  ಸೆಮಿಫೈನಲ್‌ ಎಂಬಂತೆ ಈಗಿನ್ನು ಎರಡು ವಾರಗಳ ಒಳಗೆ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗಳು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಎಪ್ರಿಲ್‌ 24ಕ್ಕೆ ಮುನ್ನ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್‌ ಗೆ 78.84 ಡಾಲರ್‌ ಇದ್ದದ್ದು ಇದೀಗ 80.56 ಡಾಲರ್‌ಗೆ ಏರಿದೆ.  ಡಾಲರ್‌ ಎದುರು ರೂಪಾಯಿ ಈಗ 66.14 ರೂ. ಆಗಿದ್ದು ತೈಲ ಆಮದು ತುಟ್ಟಿಯಾಗಿದೆ. ಆದರೂ ದೇಶದಲ್ಲಿನ ಇಂಧನ ಬೆಲೆಯನ್ನು  ಕಡಿಮೆ ಮಾಡುವ ದಿಶೆಯಲ್ಲಿ  ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಬಕಾರಿ ಸುಂಕ ಇಳಿಕೆಗೆ ಸುತರಾಂ ಒಪ್ಪುತ್ತಿಲ್ಲ. ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಆ ಬಳಿಕ ಮತ್ತೆ ಇಂಧನ ಬೆಲೆಯ ದೈನಂದಿನ ಪರಿಷ್ಕರಣೆ ಆರಂಭವಾಗುವುದೆಂದು ಈಗ ತಿಳಿಯಲಾಗಿದೆ.       

short by Pawan / more at Udayavani

Comments