Skip to main content


ರಾಜಕಾರಣಿಗಳು ಮಾತ್ರವಲ್ಲ, ಜನರೇ ಕೆಟ್ಟು ಹೋಗಿದ್ದಾರೆ : ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಗರಂ

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಸೋಲನುಭವಿಸಿದ ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ ಸಾಮಾಜಿಕ ಜಾಲತಾಣ ಯೂಟ್ಯೂಬ್ ಮೂಲಕ ತಮ್ಮ ಅಸಾಮಾಧಾನ ಹೊರಹಾಕಿದ್ದಾರೆ. "ನಾನು ಚುನಾವಣೆಯಲ್ಲಿ ಸೋತಿಲ್ಲ, ನೀವು ಸೋತಿದ್ದೀರಾ, ಇದರಿಂದ ನನಗೆ ಬಹಳ ನೋವಾಗಿದೆ. ರಾಜಕಾರಣಿಗಳು ಮಾತ್ರವಲ್ಲ, ಜನರೇ ಕೆಟ್ಟು ಹೋಗಿದ್ದಾರೆ. ತಮ್ಮನ್ನು ತಾವು ಮಾರಿಕೊಂಡಿರುವುದಲ್ಲದೆ, ಅದಕ್ಕಾಗಿ ದೇಶವನ್ನೇ ಮಾರಲು ಹೊರಟಿದ್ದಾರೆ," ಎಂದು ತಮ್ಮ ಅಳಲನ್ನು ತೋರ್ಪಡಿಸಿದರು.

short by Shraman Jain / more at Kannada News Now

Comments