Skip to main content


ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ..

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದ ವೇಳೆ ತಾನು ಇನ್ನಿಂಗ್ಸ್ ನ ಮೊದಲ ಬೌಲ್ ಎಸೆದ ಕಾರಣ ಸೆಲೆಬ್ರೇಟ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಸ್‍ಕೆ ಬೌಲರ್ ರವೀಂದ್ರ ಜಡೇಜಾ ಹೇಳಿದ್ದಾರೆ. ಶನಿವಾರ ಚೆನ್ನೈ ಹಾಗೂ ಆರ್ ಸಿಬಿ ನಡುವಿನ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಜಡೇಜಾ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಸಂತಸ ತಂದಿದೆ. ನನ್ನ ಬೌಲಿಂಗ್ ಎಂಜಾಯ್ ಮಾಡಿದ್ದೇನೆ ಎಂದರು. ಈ ಹಿಂದಿನ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ದುಬಾರಿ ಬೌಲಿಂಗ್ ಮಾಡಿದ ಜಡೇಜಾ ಆರ್ ಸಿಬಿ ವಿರುದ್ಧ ಮೂರು ವಿಕೆಟ್ ಪಡೆದು ಮಿಂಚಿದ್ದರು. ಪಂದ್ಯದಲ್ಲಿ ಮೊದಲ ಪವರ್ ಪ್ಲೇ ಮುಗಿದ ಬಳಿಕ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಅವರಿಗೆ ಬೌಲ್ ಮಾಡುವ ಅವಕಾಶವನ್ನು ಪಡೆದಿದ್ದರು. ಮೊದಲ ಎಸೆತದಲ್ಲೇ ಕೊಹ್ಲಿ ಬಿಗ್ ವಿಕೆಟ್ ಪಡೆದ ರವೀಂದ್ರ ಜಡೇಜಾ ಯಾವುದೇ ಸಂಭ್ರಮಾಚರಣೆ ಮಾಡದಿರುವುದನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.       

short by Prajwal / more at PublicTV


Comments