Skip to main content


ಕೊನೆಗೂ ನಿಗದಿಯಾಯ್ತು ದೀಪಿಕಾ - ರಣ್‍ವೀರ್ ಮದುವೆ ದಿನಾಂಕ!

ನವೆಂಬರ್ 19ರಂದು ಮುಂಬೈನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆಯಾಗಲಿದ್ದಾರೆ. ನವೆಂಬರ್ 18ರಿಣದ 20ರವರೆಗೂ ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮಗಳು ಜರುಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವರದಿಗಳ ಪ್ರಕಾರ ರಣ್‍ವೀರ್ ಹಾಗೂ ದೀಪಿಕಾ ಪಡುಕೋಣೆ ಜುಲೈ ತಿಂಗಳಲ್ಲೇ ಮದುವೆಯಾಗಬೇಕಿತ್ತು. ಆದರೆ ಇಬ್ಬರೂ ತಮ್ಮ ಕೆಲಸಗಳಲ್ಲಿ ಬ್ಯುಸಿಯಿದ್ದ ಕಾರಣ ಅವರು ತಮ್ಮ ಮದುವೆಯನ್ನು ನವೆಂಬರ್ ತಿಂಗಳಿಗೆ ಮುಂದೂಡಿದ್ದಾರೆ. ದೀಪಿಕಾ ಪೋಷಕರು ಮಗಳ ಮದುವೆಗಾಗಿ ಮುಂಬೈನಿಂದ ಬೆಂಗಳೂರಿಗೆ ತಲುಪಿದ್ದಾರೆ. ಈಗ ದೀಪಿಕಾ ತನ್ನ ಪೋಷಕರ ಜೊತೆ ಸೇರಿ ಬೆಂಗಳೂರಿನ ಪ್ರತಿಷ್ಟಿತ ಆಭರಣ ಮಳಿಗೆಯಲ್ಲಿ ಮದುವೆಯ ಶಾಪಿಂಗ್‍ನಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.   

short by Pawan / more at Public Tv

Comments