Skip to main content


ದೀಪಿಕಾ, ಮಾಜಿ ಪ್ರಿಯಕನ ಬಗ್ಗೆ ಬರೆದಿದ್ದಾದರೂ ಏನು?

ದೀಪಿಕಾ ಪಡುಕೋಣೆಗೆ ಸ್ವಲ್ಪ 'ಥ್ರೋಬ್ಯಾಕ್' ಪ್ರೀತಿ ಜಾಸ್ತಿ. ಅದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ರಣಬೀರ್ ಕಪೂರ್ ಜೊತೆ ಪ್ರೇಮದಲ್ಲಿದ್ದ ದೀಪಿಕಾ, ಕೆಲವು ಕಾರಣಗಳಿಂದ ಬ್ರೇಕಪ್ ಆಯ್ತು. ನಟಿ 'ಯೆ ಜವಾನಿ ಹೈ ದೀವಾನಿ' ಸಹ-ನಟ ರಣಬೀರ್ ಕಪೂರ್ ಅವರೊಂದಿಗೆ ಇನ್ಸ್ಟಾಗ್ರಾಂನಲ್ಲಿ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು "ಜಬ್ ನೈನಾ ಮೆಟ್ ಬನ್ನಿ" ಎಂದು ಬರೆದಿದ್ದಾರೆ. ಇತ್ತೀಚೆಗ ದೀಪಿಕಾ ರಣಬೀರ್ ಕಪೂರ್ ಅವರೊಂದಿಗೆ ಮಿಜ್ವಾನ್ ಫ್ಯಾಷನ್ ಷೋನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ತೆಗೆದ ಫೋಟೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ರಣಬೀರ್ ಮತ್ತು ದೀಪಿಕಾ ಅವರು 2013 ಯೆ ಜವಾನಿ ಹೈ ದಿವಾನಿ ಚಿತ್ರದಲ್ಲಿ ನಟಿಸಿದ್ದರು. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ, ರಣಬೀರ್ ಬನ್ನಿ ಪಾತ್ರವನ್ನು ನಿರ್ವಹಿಸಿದರೆ, ನೈನಾ ಪಾತ್ರದಲ್ಲಿ ದೀಪಿಕಾ ಅಭಿನಯಿಸಿದ್ದರು.

short by Pawan / more at Balkani News

Comments