Skip to main content


ಹರಿಪ್ರಿಯಾ ಖಡಕ್‌ ಲುಕ್‌!!

ಹರಿಪ್ರಿಯಾ ಅವರ 25ನೇ ಚಿತ್ರ "ಡಾಟರ್‌ ಆಫ್ ಪಾರ್ವತಮ್ಮ' ಸದ್ದಿಲ್ಲದೇ ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್‌ ಪಾರ್ವತಿಯಾಗಿ ನಟಿಸುತ್ತಿದ್ದು, ಅವರ ಮಗಳಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಇದು ತನಿಖಾಧಾರಿತ ಕಥೆಯಾಗಿದ್ದು, ಹರಿಪ್ರಿಯಾ ಇಲ್ಲಿ ತನಿಖಾಧಿಕಾರಿ ವೈದೇಹಿ ಪಾತ್ರ ಮಾಡುತ್ತಿದ್ದಾರೆ. ಈಗ ಅವರ ಪಾತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ.

ಹರಿಪ್ರಿಯಾ ಸಖತ್‌ ಖಡಕ್‌ ಲುಕ್‌ನಲ್ಲಿ ಪೊಲೀಸ್‌ ಜೀಪ್‌ ಪಕ್ಕ ನಿಂತಿರುವ ಗೆಟಪ್‌ ಬಿಡುಗಡೆಯಾಗಿದೆ. ಎಲ್ಲಾ ಓಕೆ, ಪೊಲೀಸ್‌ ಆಫೀಸರ್‌ ಹರಿಪ್ರಿಯಾ ಫೈಟ್‌ ಮಾಡುತ್ತಾರಾ ಎಂದು ನೀವು ಕೇಳಬಹುದು. ಇಲ್ಲಿ ಹೊಡೆದಾಟ, ಬಡಿದಾಟವಿಲ್ಲ. ಥ್ರಿಲ್ಲರ್‌ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಹರಿಪ್ರಿಯಾ ಅವರ ಪಾತ್ರ ಪ್ರಮುಖವಾಗಿದ್ದು, ಕಥೆಗೆ ಹೆಚ್ಚು ಪ್ರಾಮುಖ್ಯತೆ ಇದೆ ಎಂಬುದು ಹರಿಪ್ರಿಯಾ ಅವರ ಮಾತು.   

short by Pawan / more at Udayavani


Comments