Skip to main content


ತಮಿಳುನಾಡಿಗೆ ನೀರು ಬಿಡಿ, ಪರಿಣಾಮ ಎದುರಿಸಿ: ಸುಪ್ರೀಂ ಕೋರ್ಟ್

ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಆದರೆ, ಸರಕಾರ ಇದನ್ನು ವಿರೋಧಿಸಿದ್ದರಿಂದ ತುಸು ಕಾಲಾವಕಾಶ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲೇಬೇಕು. 'ತಮಿಳುನಾಡಿಗೆ ನೀರು ಬಿಡಿ, ಇಲ್ಲವೇ ಪರಿಣಾಮ ಎದುರಿಸಿ' ಎಂದು ಕರ್ನಾಟಕಕ್ಕೆ ನ್ಯಾ. ದೀಪಕ್​ ಮಿಶ್ರಾ ನೇತೃತ್ವದ ಪೀಠ ಎಚ್ಚರಿಕೆ ನೀಡಿದೆ. ಕರ್ನಾಟಕ ಚುನಾವಣೆ ಮುಗಿಯುವವರೆಗೆ ಕೇಂದ್ರ ಸಮಯಾವಕಾಶ ಕೋರಿದೆ. ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ನೀರು ಹಂಚಿಕೆಗೆ ಸ್ಕೀಂ ರಚಿಸಲು ಕೇಂದ್ರ ಸರಕಾರಕ್ಕೆ ಆರು ವಾರಗಳ ಗಡುವು ನೀಡಿತ್ತು. ಫೆ.16ರಂದು ನೀಡಿದ ಈ ತೀರ್ಪು ಹೊರ ಬಿದ್ದಿತ್ತು. ನಿಗದಿತ ಅವಧಿಯೊಳಗೆ ಸ್ಕೀಂ ರಚಿಸುವಲ್ಲಿ ಸರಕಾರ ವಿಫಲವಾಗಿತ್ತು. ಗಡುವು ಅಂತ್ಯವಾಗುವ ಕೊನೆಯ ದಿನ ಏ.9ಕ್ಕೆ ಸ್ಕೀಂ ರಚನೆಗೆ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರಿತ್ತು. ಜತೆಗೆ ಸ್ಕೀಂನ ವ್ಯಾಖ್ಯೆಯ ಬಗ್ಗೆ ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಆಗ ಈ ಅರ್ಜಿಗೆ ಒಪ್ಪದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಗಡುವಿನೊಳಗೆ ಸ್ಕೀಂ ರಚಿಸದ ಕೇಂದ್ರದ ವಿಳಂಬ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.      

short by Pawan / more at Suvarna News


Comments