Skip to main content


ಮೋದಿ ಇಂದು ಮಂಗಳೂರಿಗೆ : ಸಂಜೆ ಆರು ಗಂಟೆಗೆ ಭಾಷಣ

ಇದೇ ಮೊದಲ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಬೃಹತ್‌ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡುವುದಕ್ಕೆ ಶನಿವಾರ ಮಂಗಳೂರು ನಗರಕ್ಕೆ ಆಗಮಿಸಲಿದ್ದು, ಬಿಜೆಪಿ ವತಿಯಿಂದ ಅಭೂತಪೂರ್ವ ಸ್ವಾಗತ ಕೋರುವುದಕ್ಕೆ ಕಡಲನಗರಿ ಪೂರ್ಣಸಜ್ಜುಗೊಂಡಿದೆ. ನಗರದ ಕೇಂದ್ರ ಮೈದಾನದಲ್ಲಿ ಶನಿವಾರ ನಡೆಯಲಿರುವ ಬಿಜೆಪಿಯ ಪ್ರಚಾರ ಸಭೆಗೆ ಮೋದಿಯವರು ಶಿವಮೊಗ್ಗದಿಂದ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 6 ಗಂಟೆಗೆ ಆಗಮಿಸುವರು. ಅಲ್ಲಿಂದ ಅವರು ರಸ್ತೆ ಮೂಲಕ ಕೇಂದ್ರ ಮೈದಾನಕ್ಕೆ ಆಗಮಿಸುವರು. ಮೋದಿ ಆಗಮಿಸುವ ವೇಳೆ ಮಂಗಳೂರು ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ರಸ್ತೆಯುದ್ದಕ್ಕೂ ಝೀರೋ ಟ್ರಾಫಿಕ್‌ ಮಾಡಲಾಗುತ್ತದೆ.               

short by NP / more at Udayavani

Comments