Skip to main content


ರಶ್ಮಿಕಾಗೆ ಕಾಲ್ ಮಾಡಿ ಮುಂದಿನ ವಾರವೇ ಮದುವೆ ಆಗೋಣ ಎಂದ ರಕ್ಷಿತ್.. ಇದಕ್ಕೆ ಸಾನ್ವಿ ಉತ್ತರವೇನು..?

ಹೌದು, ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ ಪರಿಚಯವಾದ ರಶ್ಮಿಕಾ ಹಾಗೆ ರಕ್ಷಿತ್ ಶೆಟ್ಟಿ ದಂಪತಿಗಳಾಗಲು ಮುಂದಾಗಿರುವುದನ್ನ ನಿಮಗೆ ಬಿಡಿಸಿ ಹೇಳಬೇಕಿಲ್ಲ .. ಈ ಹಿಂದೆ ಎಂಗೇಜ್ಮೆಟ್ ಮುಗಿಸಿಕೊಂಡ ಈ ಜೋಡಿ ತಮ್ಮ ಕೆರಿಯರ್ ಬಗ್ಗೆ ತಲೆ ಕಡಿಸಿಕೊಂಡಿದ್ದು ಮದುವೆಯನ್ನ ಒಂದು ವರ್ಷ ಮುಂದಕ್ಕೆ ಹಾಕಿದೆ. ಹೀಗಾಗೆ ರಶ್ಮಿಕಾ ಹಾಗೆ ರಕ್ಷಿತ್ ತಮ್ಮ ತಮ್ಮ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ಬ್ಯೂಸಿಯಾಗಿದ್ದಾರೆ .. ಈ ನಡುವೆ ರಕ್ಷಿತ್ ಶಿವರಾಜ್ ಕುಮಾರ್ ನಡೆಸಿಕೊಡುವ ನಂ 1 ಯಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.. ಈ ಸಂದರ್ಭದಲ್ಲಿ ಶಿವಣ್ಣ ರಶ್ಮಿಕಾ ಗೆ ಕಾಲ್ ಮಾಡಿ ಮುಂದಿನ ವಾರವೇ ಮದುವೆ ಆಗೋಣ ಎಂದು ಕೇಳಲು ರಕ್ಷಿತ್ ಗೆ ಹೇಳಿದ್ರು. ಇದೇ ವಿಚಾರವಾಗಿ ರಶ್ಮಿಕಾ ಗೆ ಕರೆ ಮಾಡಿದ ರಕ್ಷಿತ್ ಮುಂದಿನ ವಾರವೇ ಮದುವೆ ಆಗೋಣ ರೆಡಿನಾ ಅಂದ್ರು. ಇದಕ್ಕೆ ರಶ್ಮಿಕಾ ನನಗೇನು ಪ್ರಾಬ್ಲಂ ಇಲ್ಲ ನಾನ್ ರೆಡಿ ಅಂದೇ ಬಿಟ್ರು.     

short by Pawan / more at Vahini Tv

Comments