Skip to main content


ಒಂದೇ ದಿನ ಮನೆಗೆ ಬಂದ್ರು ನಾಲ್ವರು ಸೊಸೆಯಂದಿರು

ಉತ್ತರಾಖಂಡದ ಉತ್ತರಕಾಶಿ ಬ್ಲಾಕ್ ನಲ್ಲಿ ಮಾದರಿ ಮದುವೆಯೊಂದು ನಡೆದಿದೆ. ಒಂದೇ ಬಾರಿ ಒಂದೇ ಮನೆಗೆ 4 ವಧುಗಳ ಗೃಹ ಪ್ರವೇಶವಾಗಿದೆ. ನಾಲ್ವರು ಸಹೋದರರು ಒಂದೇ ಬಾರಿ ತಮ್ಮ ವಧುಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. ಸ್ವಾಯಿಘಾಟಿ ಗ್ರಾಮದಲ್ಲಿ ಸಾಮೂಹಿಕ ವಿವಾಹ ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಆದ್ರೆ ಇದೇ ಮೊದಲ ಬಾರಿ ಒಂದೇ ಮನೆಯ ನಾಲ್ವರು ಸಹೋದರರು ಒಂದೇ ಬಾರಿ ವಿವಾಹವಾದ ಘಟನೆ ನಡೆದಿದೆ. ಗ್ರಾಮದ ಪರಂಪರೆಯನ್ನು ಉಳಿಸಿದ ಸಹೋದರರ ತಾಯಿ ಮದುವೆಗೆ ಬರ್ತಿದ್ದ ಖರ್ಚನ್ನು ಉಳಿಸಿದ್ದಾರೆ. ಗೃಹ ಪ್ರವೇಶದ ವೇಳೆ ಗ್ರಾಮದ ಜನರೆಲ್ಲ ಸೇರಿ ನವವಧುಗಳಿಗೆ ಆಶೀರ್ವಾದ ಮಾಡಿದ್ದಾರೆ.     

short by Pawan / more at Kannadadunia

Comments