Skip to main content


ಪ್ರಭಾಸ್‌ ರೇಂಜ್‌ಗೆ ಅಭಿಷೇಕ್‌

ಅಂಬರೀಶ್‌ ಪುತ್ರ ಅಭಿಷೇಕ್‌ ಚಿತ್ರ "ಅಮರ್‌'ಗೆ ಹಸಿರು ನಿಶಾನೆ ಸಿಕ್ಕಾಗಿದೆ. ಕಳೆದ ಒಂದು ವಾರದ ಹಿಂದಷ್ಟೇ ಅಭಿಷೇಕ್‌ ಅವರ ಫೋಟೋ ಶೂಟ್‌ ಕೂಡ ನಡೆದಿದೆ. ಛಾಯಾಗ್ರಾಹಕ ಮೋಹನ್‌ಗೌಡ ಅವರು ಅಭಿಷೇಕ್‌ ಅವರ ಚೆಂದದ ಫೋಟೋಗಳನ್ನು ತೆಗೆದಿದ್ದಾರೆ. ಔಟ್‌ಡೋರ್‌, ಇನ್‌ಡೋರ್‌ನಲ್ಲೂ ಫೋಟೋ ಶೂಟ್‌ ಮಾಡಿರುವುದು ವಿಶೇಷ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ, ನಾಗಶೇಖರ್‌ ಹೆಣೆದಿರುವ ಕಥೆ ಅಂತಿಮವಾಗಿದ್ದು, ಚುನಾವಣೆ ನಂತರ ಅದಕ್ಕೊಂದು ಸ್ಪಷ್ಟತೆ ಸಿಗಲಿದೆ. ಆದರೆ, ನಾಗಶೇಖರ್‌ ಕಂಡಂತೆ, ಫೋಟೋ ಶೂಟ್‌ನಲ್ಲಿ ಅಭಿಷೇಕ್‌ ಅಂಬರೀಶ್‌ ಅವರು ಪ್ರಭಾಸ್‌ ರೇಂಜ್‌ನಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನಾಗಶೇಖರ್‌. "ಇಷ್ಟರಲ್ಲೇ ಫೋಟೋಶೂಟ್‌ನ ಮೇಕಿಂಗ್‌ ಜೊತೆಗೆ ಸಣ್ಣದ್ದೊಂದು ಟೀಸರ್‌ ಸಿದ್ಧಗೊಳಿಸಿ, ಪತ್ರಿಕಾಗೋಷ್ಠಿಯಲ್ಲೇ ಅನಾವರಣಗೊಳಿಸಬೇಕೆಂಬ ಕಟ್ಟಪ್ಪಣೆ ಅಂಬರೀಶ್‌ ಅವರಿಂದ ಆಗಿರುವುದರಿಂದ, ಯಾವುದೇ ಫೋಟೋವಾಗಲಿ, ಮೇಕಿಂಗ್‌ ವಿಡೀಯೋವಾಗಲಿ ಬಿಡುಗಡೆ ಮಾಡುವಂತಿಲ್ಲ' ಎನ್ನುತ್ತಾರೆ ನಾಗಶೇಖರ್‌.     

short by Pawan / more at Udayavani

Comments