Skip to main content


ಮತ್ತೆ "ರಿಚ್ಚಿ" ಅವತಾರದಲ್ಲಿ ರಕ್ಷಿತ್ ಶೆಟ್ಟಿ

'ರಿಚ್ಚಿ' ಅಂದ ತಕ್ಷಣ ಉಳಿದವರು ಕಂಡಂತೆ ಸಿನಿಮಾ ನೆನಪಾಗುತ್ತದೆ. ಅಷ್ಟರ ಮಟ್ಟಿಗೆ ರಿಚ್ಚಿ ಪಾತ್ರ ನೋಡುಗರನ್ನ ಆಕರ್ಷಣೆ ಮಾಡಿತ್ತು. ಅಷ್ಟೇ ಅಲ್ಲದೆ ಅದೇ ಚಿತ್ರದಲ್ಲಿ ರಿಚ್ಚಿ ಪಾತ್ರದ ಸಂಭಾಷಣೆಗಳು ಟ್ರೆಂಡ್ ಸೆಟ್ ಮಾಡುವಷ್ಟು ಪ್ರಖ್ಯಾತಿಗಳಿಸಿತ್ತು. ಈಗ ಅದೇ ಪಾತ್ರ ಮತ್ತೆ ತೆರೆ ಮೇಲೆ ಮೂಡಿ ಬರಲಿದೆ. ಹೌದು 'ರಿಚ್ಚಿ' ಹೆಸರಿನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ಹೆಚ್ಚಾಗಿದೆ. ರಿಕ್ಕಿ ಹಾಗೂ ಕಿರಿಕ್ ಪಾರ್ಟಿ ಸಿನಿಮಾ ನಿರ್ದೇಶನ ಮಾಡಿ ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನ್ನಿಸಿಕೊಂಡ ರಿಷಬ್ ಶೆಟ್ಟಿ ರಿಚ್ಚಿ ಪಾತ್ರವನ್ನ ಮನಸ್ಸಿನಲ್ಲಿಟ್ಟಿಕೊಂಡು ಚಿತ್ರ ಮಾಡಲು ನಿರ್ಧಾರ ಮಾಡಿದ್ದಾರೆ. ವಿಭಿನ್ನವಾಗಿರುವ ಕಥೆಯ ಮೂಲಕ ವೀಕ್ಷರ ಮುಂದೆ ಬರಲು ಸಜ್ಜಾಗಿರುವ ರಿಷಬ್ ಈ ಸಿನಿಮಾ ರಕ್ಷಿತ್ ವೃತ್ತಿ ಜೀವನದಲ್ಲಿ ಬೆಸ್ಟ್ ಎನ್ನಿಸುವಂತಾಗುತ್ತದೆ ಎಂದಿದ್ದಾರೆ. ರಿಚ್ಚಿ ಪಾತ್ರವನ್ನ ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡಲು ನಿರ್ಧರಿಸಿದ್ದು ಟೈಟಲ್ ರಿಚ್ಚಿ ಅಂತಾನೆ ಇರಲಿದ್ಯಾ ಎನ್ನುವುದನ್ನು ನಿರ್ದೇಶಕರು ಕನ್ಫರ್ಮ್ ಮಾಡಿಲ್ಲ.

short by Pawan / more at Filmibeat

Comments