Skip to main content


ಯಶ್-ರಾಧಿಕಾ ಅವರಿಗೆ ಮಗು ಆದ್ರೆ ಮೊದಲ ತಿಳಿಸುವುದು ಇವರಿಗೆ ಅಂತೆ..!!

ಕಳೆದ ವರ್ಷವಷ್ಟೇ ಮದುವೆಯಾಗಿರುವ ಈ ಜೋಡಿ ಎಲ್ಲಿ ಹೋದರು ಒಂದೇ ಪ್ರಶ್ನೆ‌ ಕೇಳ್ತಾರಂತೆ. ಇದೇ ಪ್ರಶ್ನೆ ಇಂದು ಕೂಡ ಕೇಳಲಾಯಿತು.. ಅದು ಕೇಳಿದ್ದು ಬೇರೆ ಯಾರು ಅಲ್ಲ ಬಿಗ್ ಬಾಸ್ ಖ್ಯಾತಿ ಒಳ್ಳೆ ಹುಡುಗ ಪ್ರಥಮ್.. ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಸಿನಿಮಾ ಸಮಾರಂಭದಲ್ಲಿ ಈ ಜೋಡಿ ಭಾಗವಹಿಸಿದರು. ಸಮಾರಂಭಕ್ಕೆ ಬರುತ್ತಿದ್ದಂತೆ ನಿರೂಪಣೆ ಜವಾಬ್ದಾರಿ ಹೊತ್ತಿದ್ದ ಒಳ್ಳೆ ಹುಡುಗ ಪ್ರಥಮ್ ಕೇಳಿದ ಪ್ರಶ್ನೆ ಜೂನಿಯರ್ ಯಶ್ ಹಾಗೂ ಜೂನಿಯರ್ ರಾಧಿಕಾ ಯಾವಾಗ ಎಂದು. ಇದಕ್ಕೆ ಯಶ್ ಕೊಟ್ಟ್ರು ಖಡಕ್ ಉತ್ತರ.. ಇನ್ನೂ ಮದುವೆಯಾಗಿ ಒಂದು ವರ್ಷವಾಗಿದೆ ಅಷ್ಟೇ. ಇನ್ನು ಸಾಕಷ್ಟು ಸಮಯವಿದೆ, ಹಾಗೇನಾದರೂ ಇದ್ರೆ ನಿನ್ನಗೆ ಮೊದಲು ಮೆಸೇಜ್ ಮಾಡಿ ತಿಳಿಸುವೆ, ಚಿಂತಿಸಬೇಡ, ಎಂದು ತಮಾಷೆ ಮಾಡಿದರು.    

short by Pawan / more at Vahini Tv

Comments