Skip to main content


ಬಹುಕೋಟಿ ವಂಚನೆಗೈದು ದೇಶ ತೊರೆದ ಉದ್ಯಮಿಯ ಜೊತೆಗೆ ಸಿಎಂ ನಂಟು!

ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೇಶದಲ್ಲಿ ಬಹುಕೋಟಿ ರೂ. ವಂಚನೆಗೈದು ಪರಾರಿಯಾಗಿರುವ ಹೂಡಿಕೆದಾರನ ವಿರುದ್ಧ ನಂಟು ಹೊಂದಿರುವ ಆರೋಪ ಕೇಳಿಬಂದಿದೆ. ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ದಾಖಲೆಗಳನ್ನು ಬಿಡುಗಡೆಗೊಳಿಸಿ ಉದ್ಯಮಿ ವಿಜಯ್ ಈಶ್ವರನ್ ಜೊತೆ ಸಿದ್ದರಾಮಯ್ಯ ನಂಟು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆಗಸ್ಟ್ 13, 2013ರಂದು ಸಿಎಂ ಚೀನಾಕ್ಕೆ ತೆರಳಿದ್ದ ವೇಳೆ ವಿಜಯ್ ಈಶ್ವರನ್‍ನನ್ನು ಭೇಟಿ ಮಾಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಪ್ರಸ್ತುತ ಮಲೇಷ್ಯಾದಲ್ಲಿರುವ ವಿಜಯ್ ಈಶ್ವರನ್ ತಮಿಳುನಾಡಿನಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಡೆ ಎಫ್‍ಐಆರ್ ದಾಖಲಾಗಿದೆ. ಚೆನ್ನೈ ಮತ್ತು ಮುಂಬೈ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್ 2009ರಿಂದ ದೇಶವನ್ನು ತೊರೆದು ಪರಾರಿಯಾಗಿದ್ದ. ದೇಶದೆಲ್ಲೆಡೆ ಎಫ್‍ಐಆರ್ ದಾಖಲಾದ ವಿಚಾರ ತಿಳಿದಿದ್ದರೂ ಅಕ್ರಮ ಎಸಗಿರುವ ಕಂಪೆನಿಯ ಜೊತೆ ಗುರುತಿಸಿಕೊಂಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು. ಯುಪಿಎ ಸರ್ಕಾರ ಎರಡು ಬಾರಿ ಇದ್ದಾಗಲೂ ಈ ಉದ್ಯಮಿಯ ರಕ್ಷಿಸಿತ್ತು. ಈಗ ಸಿಎಂ ಸಿದ್ದರಾಮಯ್ಯ ಈ ವ್ಯಕ್ತಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.        

short by Pawan / more at Public Tv

Comments