Skip to main content


ಬಯಲಾಯ್ತು 'ಯಜಮಾನ’ದಲ್ಲಿ ದರ್ಶನ್ ಪಾತ್ರದ ಮಹಾರಹಸ್ಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಮಹಾರಹಸ್ಯ ರಿವೀಲ್ ಆಗಿದ್ದು, ಯಜಮಾನ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಗಾಂಧಿನಗರದಲ್ಲೊಂದು ಸುದ್ದಿ ಹರಿದಾಡುತ್ತಿದೆ. ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರು ಸಾಥ್ ನೀಡುತ್ತಿದ್ದಾರೆ. ಆದರೆ ಚಿತ್ರತಂಡ ಇದುವರೆಗೂ ದರ್ಶನ್ ಪಾತ್ರದ ಬಗ್ಗೆ ಮಾತ್ರ ರಿವೀಲ್ ಮಾಡಿರಲಿಲ್ಲ. ಇದೀಗ ಯಜಮಾನ ಸಿನಿಮಾದಲ್ಲಿ ದರ್ಶನ್ ಪಾತ್ರದ ಕುರಿತಾಗಿ ಸುಳಿವು ಸಿಕ್ಕಿದೆ. ದರ್ಶನ್ ಬೃಂದಾವನ ಸಿನಿಮಾದಲ್ಲಿ ಮಾಡ್ರನ್ ಶ್ರೀಕೃಷ್ಣನಾಗಿ ಕಮಾಲ್ ಮಾಡಿದ್ದರು. ಈಗ ಯಜಮಾನ ಸಿನಿಮಾದಲ್ಲಿ ಮುರಾರಿ ಅವತಾರವೆತ್ತಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಕ್ಲೀನ್ ಶೇವ್ ಲುಕ್‍ನಲ್ಲಿ ಯಜಮಾನ ಸೆಟ್‍ ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಶ್ರೀಕೃಷ್ಣನಾಗಿರಬಹುದು ಎಂಬ ಅನುಮಾನ ಮೂಡಿಸಿದೆ.       

short by Pawan / more at Public Tv

Comments