Skip to main content


ನನ್ನ ಶಂಕರನ ಸಾವಿಗೆ ಆಕೆಯೇ ಕಾರಣ. ಆಕೆ ಹೆಂಗಸಲ್ಲ; ಹೆಮ್ಮಾರಿ. ಅನಂತ್ನಾಗ್ ಶಂಕರ್ ಸಾವಿನ ಕುರಿತು ಹೇಳಿದ ಮಾತಿದು! ಆ ಮಾಯಾವಿ ಯಾರು.?

“ನನ್ನ ಶಂಕರನ ಸಾವಿಗೆ ಆಕೆಯೇ ಕಾರಣ. ಆಕೆ ಹೆಂಗಸಲ್ಲ; ಹೆಮ್ಮಾರಿ. ಶಂಕರನ ಪಾಲಿನ ಮಾಯಾವಿ. ಸಾಕ್ಷಾತ್ ಯಮ ಸ್ವರೂಪಿ. ಯಾರನ್ನಾದರೂ ಕ್ಷಮಿಸಿಯೇನು, ಆದರೆ ಆಕೆಯನ್ನು ಏಳೇಳು ಜನ್ಮದಲ್ಲೂ ಕ್ಷಮಿಸಲಾರೆ. ಏಕೆಂದರೆ ನನ್ನ ಜೀವಕ್ಕೆ ಜೀವವಾಗಿದ್ದ ಪರಮಾಪ್ತ ತಮ್ಮನನ್ನು, ಗೆಳೆಯನನ್ನು ಕೊಂದ ಪರಮ ಪಾತಕಿ ಆಕೆ…” ಎಂದು ಹೇಳುತ್ತಾ ಅನಂತ್ ಒಮ್ಮೆ ಜೋರಾಗಿ ಟೇಬಲನ್ನು ಗುದ್ದಿದರು. ಅನಂತ್ ಕುಡಿದಿದ್ದರು. ಅದು ಹುಬ್ಬಳ್ಳಿಯ ಉಣಕಲ್ ಕೆರೆ ದಂಡೆಯಲ್ಲಿರುವ ನವೀನ್ ಹೋಟೆಲು. 

ಹುಬ್ಬಳ್ಳಿ ಕಡೆ ಹೋದಾಗಲೆಲ್ಲಾ ಅಲ್ಲೇ ಹಾಲ್ಟ್. ಅಂದೂ ಅಷ್ಟೇ. ನಾವೆಲ್ಲಾ, ಅಂದರೆ ನಾನು, ರವಿಬೆಳಗೆರೆ, ಉದಯ ಮರಕಿಣಿ ಮತ್ತು ಅನಂತನಾಗ್ ಜತೆಯಾಗಿಯೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದೆವು. ಆಗ ರವಿ ಬೆಳಗೆರೆ ಮತ್ತು ನಾನು ‘ಕರ್ಮವೀರ’ ವಾರಪತ್ರಿಕೆಯ ನಿರ್ವಹಣೆಯ ಹೊಣೆ ಹೊತ್ತಿದ್ದೆವು. ಇದು ವ್ಯವಸ್ಥಾಪಕ ಸಂಪಾದಕರಾದ ಕೆ.ಶಾಮರಾವ್ ಅವರ ಆಜ್ಞೆ. ನಿಂತು ಹೋದ ‘ಕರ್ಮವೀರ’ಕ್ಕೆ ದೊಡ್ಡ ಚಿಕಿತ್ಸೆಯೇ ಆಗಬೇಕಿತ್ತು.

ಅನಂತನಾಗ್ ಕೈಲಿ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಿದರೆ ‘ಕರ್ಮವೀರ’ಕ್ಕೆ ಪ್ರಚಾರ ಸಿಗುತ್ತದೆ ಎನ್ನುವುದು ನನ್ನ ಐಡಿಯಾ. ಐಡಿಯಾ ವರ್ಕೌಟ್ ಆಯಿತು. ಶಾಮರಾಯರ ಒಪ್ಪಿಗೆಯ ಮುದ್ರೆ ಬಿದ್ದದ್ದೇ ತಡ ನಾನು, ರವಿಬೆಳಗೆರೆ ಮತ್ತು ಉದಯ ಮರಕಿಣಿ ಕಾರ್ಯಪ್ರವೃತ್ತರಾದೆವು.    

short by Pawan / more at Karunaadu

Comments