Skip to main content


ಹ್ಯಾರಿ ಮದುವೆಗೆ ಊಟ ಇಲ್ವಾ?

ಬ್ರಿಟನ್‌ ರಾಜಕುಮಾರ ಹ್ಯಾರಿ ಹಾಗೂ ಮೆಘನ್‌ ಮಾರ್ಕೆಲ್‌ ಅವರ ವಿವಾಹಕ್ಕೆ ಸಂಬಂಧಪಟ್ಟಂತೆ ಸಣ್ಣದೊಂದು ಗೊಂದಲ ಹುಟ್ಟಿಕೊಂಡಿದೆ. ಆಯ್ದ 1,200 ವ್ಯಕ್ತಿಗಳಿಗೆ ಆಮಂತ್ರಣ ನೀಡಲಾಗಿದೆ. ಆದರೆ, ಅವರಲ್ಲಿ ಕೆಲವರಿಗೆ ಅನಾಮಧೇಯ ಪತ್ರಗಳು ಬಂದಿದ್ದು, ಅದರಲ್ಲಿ ಮದುವೆಗೆ ಬರುವ ಅತಿಥಿಗಳು, ತಮ್ಮ ಊಟವನ್ನು ತಾವೇ ತರಬೇಕು. ಇಲ್ಲವೇ, ಮದುವೆ ಹಾಲ್‌ನಲ್ಲಿ ಏರ್ಪಡಿಸಲಾಗಿರುವ ಆಹಾರ ಕೌಂಟರ್‌ಗಳಲ್ಲಿ ಹಣ ಕೊಟ್ಟು ಊಟ ಖರೀದಿಸಬೇಕು ಎಂದು ಸೂಚಿಸಲಾಗಿದೆಯಂತೆ.       

short by NP / more at Udayavani

Comments