Skip to main content


ಸ್ಯಾಂಡಲ್ ವುಡ್ ನಟಿಯರಿಗೆ ಚಾಲೆಂಜ್ ನೀಡಿದ ಶಾನ್ವಿ ಶ್ರೀವಾಸ್ತವ

ಸ್ಯಾಂಡಲ್ ವುಡ್ ಮುದ್ದಾದ ನಟಿ ಶಾನ್ವಿ ಶ್ರೀವಾಸ್ತವ. ನಮ್ಮ ಸುತ್ತ ಮುತ್ತಲಿನ ಪರಿಸರ ಹಾಳಾಗುತ್ತಿದೆ ಇದಕ್ಕೆ ಮೂಲ ಕಾರಣ ಪ್ಲಾಸ್ಟಿಕ್ ಬಳಕೆಯಿಂದಾಗಿ ಆದ್ದರಿಂದ ಶಾನ್ವಿ ಶ್ರೀವಾಸ್ತವ 'ನೋಸ್ಟ್ರಾ ಚಾಲೆಂಜ್ ಬೈ ಶಾನ್ವಿ' ಅನ್ನುವ ಅಭಿಯಾನ ಆರಂಭ ಮಾಡಿದ್ದಾರೆ. ಸಾಮಾನ್ಯವಾಗಿ ತಂಪು ಪಾನಿಯಾಗಳನ್ನ ಕುಡಿಯಲು ಎಳನೀರು ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಗಳನ್ನು ಬಳಕೆ ಮಾಡುತ್ತೇವೆ. ಇನ್ನು ಮುಂದೆ ಅವುಗಳನ್ನ ಬಳಕೆ ಮಾಡದೆ ಎಳನೀರು ಕುಡಿಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಶಾನ್ವಿ ಎಳನೀರು ಕುಡಿಯುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿ ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ನಟಿ ರಾಧಿಕಾ ಪಂಡಿತ್, ಆಕಾಂಕ್ಷ ಸಿಂಗ್, ರಕ್ಷಿತ್ ಶೆಟ್ಟಿ ಇನ್ನು ಅನೇಕ ಸ್ನೇಹಿತರಿಗೆ ಸಲಹೆ ನೀಡಿದ್ದಾರೆ.     

short by Pawan!

Comments