Skip to main content


ಒಂದು ಲಕ್ಷ ಕೋಟಿ ರೂ.ಗೆ ಫ್ಲಿಪ್‌ಕಾರ್ಟ್‌ ಸೇಲ್‌

ಬೆಂಗಳೂರು ಮೂಲದ ದೇಶದ ಅತೀ ದೊಡ್ಡ ಇ-ಕಾಮರ್ಸ್‌ ಕಂಪೆನಿ ಫ್ಲಿಪ್‌ಕಾರ್ಟ್‌ ಅನ್ನು ಅಮೆರಿಕದ ದೈತ್ಯ ಕಂಪೆನಿ ವಾಲ್‌ಮಾರ್ಟ್‌ 1 ಲಕ್ಷ ಕೋಟಿ ರೂ. ಗೆ ಖರೀದಿಸಿದೆ. ವಾಲ್‌ಮಾರ್ಟ್‌ ಕಂಪೆನಿ ಫ್ಲಿಪ್‌ಕಾರ್ಟ್‌ನ ಶೇ. 77 ಷೇರುಗಳನ್ನು ಖರೀದಿಸಲಿದೆ. ಇದು ಭಾರತದ ಇ- ಕಾಮರ್ಸ್‌ ಕ್ಷೇತ್ರದಲ್ಲೇ ಅತೀ ದೊಡ್ಡ ಸ್ವಾಧೀನ ಯೋಜನೆ. ಇದರ ಬೆನ್ನಲ್ಲೇ ಸ್ಥಾಪಕ ಸಂಸ್ಥಾ ಪಕ ಸಚಿನ್‌ ಬನ್ಸಾಲ್‌ ಫ್ಲಿಪ್‌ಕಾರ್ಟ್‌ನಿಂದ ಹೊರ ನಡೆದಿದ್ದಾರೆ. ಹಾಗೆಯೇ ಸಾಫ್ಟ್ಬ್ಯಾಂಕ್‌ ಕೂಡ ತನ್ನ ಶೇ. 20 ಷೇರುಗಳನ್ನು ಮಾರಿದೆ. ಇದರ ಬದಲಾಗಿ ಗೂಗಲ್‌ ಮಾತೃಸಂಸ್ಥೆ ಅಲ್ಫಾಬೆಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಶೇ. 15 ಹೂಡಿಕೆ ಮಾಡುವ ಸಂಭವವಿದೆ. ಡೀಲ್‌ ಮುಗಿಯುತ್ತಿದ್ದಂತೆ ಫ್ಲಿಪ್‌ಕಾರ್ಟ್‌ನಲ್ಲಿ 13 ಸಾವಿರ ಕೋಟಿ ರೂ. ಹೆಚ್ಚುವರಿ ಹೂಡಿಕೆ ಮಾಡುವುದಾಗಿ ವಾಲ್‌ಮಾರ್ಟ್‌ ಹೇಳಿದೆ.

ಗ್ರಾಹಕರಿಗೇನು ಲಾಭ? 
ದೇಶದಲ್ಲಿ ಒಟ್ಟು ವ್ಯಾಪಾರಕ್ಕೆ ಹೋಲಿಸಿದರೆ ಇ-ಕಾಮರ್ಸ್‌ನ ವಹಿವಾಟು ಶೇ. 15 ಆಗಿದೆ. ಈ ಪ್ರಮಾಣವನ್ನು ಹೆಚ್ಚಿಸಲು ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಪ್ರಯತ್ನಿಸುತ್ತಲೇ ಇವೆ. ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಸಹಜ ವಾಗಿಯೇ ರಿಯಾಯಿತಿ ಗಳನ್ನು ನೀಡಬೇಕಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ರಿಯಾಯಿತಿ ಗಳು ಹಾಗೂ ಕಡಿಮೆ ದರದಲ್ಲಿ ಸಾಮಗ್ರಿಗಳು ಲಭ್ಯವಾಗುವ ನಿರೀಕ್ಷೆಯಿದೆ. ವರ್ಷಾಂತ್ಯದಲ್ಲಿ ಒಪ್ಪಂದ ಅಂತಿಮಗೊಂಡ ಬಳಿಕ ಅಮೆಜಾನ್‌ ಜತೆಗಿನ ಪೈಪೋಟಿ ಹೆಚ್ಚಲಿದೆ.         

short by Pawan / more at Udayavani

Comments