Skip to main content


ಧೋನಿ ಕುಡಿಯೋ ನೀರಿನ ಬಾಟಲ್ ಬೆಲೆಯೆಷ್ಟು ಗೊತ್ತಾ?!

ಸೆಲೆಬ್ರಿಟಿಗಳ ಸಣ್ಣ ಸಣ್ಣ ಸಂಗತಿಗಳೂ ನಮಗೆ ದೊಡ್ಡದೆ. ಅವರೇನೇ ಮಾಡಿದರೂ ನಮಗೊಂಥರಾ ಕುತೂಹಲ, ಅಚ್ಚರಿಯೇ. ಐಪಿಎಲ್ ನಂಥ ಚುಟುಕು ಓವರ್ ಕ್ರಿಕೆಟ್ ಸಂದರ್ಭ ಸಣ್ಣ ವಿರಾಮ ನೀಡಲಾಗುತ್ತದೆ. ಆಗ ಆಟಗಾರರು ತಂಪು ಪಾನೀಯ ಅಥವಾ ನೀರನ್ನು ಸೇವಿಸಿ ಸಣ್ಣಗೆ ದಣಿವಾರಿಸಿಕೊಳ್ಳುತ್ತಾರೆ. ಆ ಹೊತ್ತಿನಲ್ಲಿ ನಮ್ಮ ಕೂಲ್ ಕ್ಯಾಪ್ಟನ್ ಧೋನಿ ಸೇವಿಸೋ ನೀರಿನ ಬಾಟಲ್ ಬರೀ 20 ರೂಪಾಯಿಯದ್ದು! ಹೌದು, ಪಂದ್ಯ ವಿರಾಮದ ವೇಳೆ ಉಳಿದ ಆಟಗಾರರು ದೊಡ್ಡ ದೊಡ್ಡ ಬ್ರಾಂಡ್ ನ ಕಾಸ್ಟ್ಲಿ ನೀರಿನ ಬಾಟಲ್ ಗಳ ಮೊರೆ ಹೋದರೆ, ಧೋನಿ 'ಬೈಲೇ' ಎನ್ನುವ ಕಂಪನಿಯ ಬಾಟಲ್ ನೀರನ್ನು ಕುಡಿಯುತ್ತಾರೆ. 1 ಲೀಟರ್ ಈ ನೀರಿನ ಈ ಬಾಟಲ್ ಬೆಲೆ 20 ರೂಪಾಯಿ. ಹಾಗಾದರೆ ಉಳಿದೋರು ಅದೆಷ್ಟು ಕಾಸ್ಟ್ಲಿ ಬಾಟಲ್ ನೀರು ಕುಡೀಬೋದು?  ಅಂದ್ಹಾಗೆ ನಮ್ಮ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕುಡಿಯುವ 1 ಲೀಟರ್ ನೀರಿನ ಬಾಟಲ್ ಬೆಲೆ ಜಸ್ಟ್ 500 ರೂಪಾಯಿಯಷ್ಟೇ! ಕೊಹ್ಲಿ ಫ್ರಾನ್ಸ್ ನಿಂದ 'ಇವಿಯನ್' ಬ್ರ್ಯಾಂಡ್ ನ ನೀರಿನ ಬಾಟಲಿಗಳನ್ನು ಆಮದು ಮಾಡಿಕೊಂಡಿದ್ದಾರೆ. ಇದು ಕೊಂಚ ದುಬಾರಿ ನೀರಿನ ಬಾಟಲ್. ಆದ್ರೆ ಧೋನಿಯ ಸಿಂಪ್ಲಿಸಿಟಿಯನ್ನು ನಾವಿಲ್ಲಿ ಗಮನಿಸಲೇಬೇಕು.    

short by Pawan / more at MyKhel Kannada


Comments