Skip to main content


ನಟರನ್ನು ಬಚ್ಚಾಗಳು ಎಂದು ಅವಮಾನಿಸಿದವರ ಜನ್ಮ ಜಾಲಾಡಿದ ಯಶ್..!

ನಟರು ಬಂದು ಮತ ಕೇಳಿದರೆ ಜನ ಮತ ಹಾಕಿ ಬಿಡುವುದಿಲ್ಲ ನಾನು ಒಂಬತ್ತು ವರ್ಷ ಹುಡುಗನಿದ್ದಾಗಲೆ ಬಣ್ಣ ಹಚ್ಚಿದ್ದೇ ನನ್ನ ಮುಂದೆ ಕಿಚ್ಚ ಸುದೀಪ್ ಮತ್ತು ಯಶ್ ಇಬ್ಬರೂ ಬಚ್ಚಗಳು ಎಂದು ತಿಪ್ಪೇಸ್ವಾಮಿ ಅವರು ಹೇಳಿಕೆ ನೀಡಿದ್ದರು. ಇನ್ನು ತಿಪ್ಪೇಸ್ವಾಮಿ ಅವರ ಈ ವಿವಾದಾತ್ಮಕ ಹೇಳಿಕೆ ಕುರಿತು ಯಾವೊಬ್ಬ ನಟನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಯಶ್ ಅವರು ತಿಪ್ಪೇಸ್ವಾಮಿ ಅವರ ಈ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಹೌದು ನಾವು ತಿಪ್ಪೇಸ್ವಾಮಿ ಅವರ ಎದುರು ಬಚ್ಚಾ ಯಾಕೆಂದರೆ ವಯಸ್ಸಿನಲ್ಲಿ ಅವರು ಹಿರಿಯರು ನಾನು ಕಿರಿಯ ಹೀಗಾಗಿ ಅವರ ಮುಂದೆ ನಾನು ಬಚ್ಚಾ ಎಂದು ಹೇಳಿದ್ದಾರೆ. ಜನರಿಗೆ ಯಾರನ್ನು ಆರಿಸಬೇಕು ಎಂಬುದು ಚೆನ್ನಾಗಿ ಗೊತ್ತು ನಾವು ಅವರಿಗೆ ಹೇಳಬೇಕಾಗಿಲ್ಲ ಶ್ರೀರಾಮುಲು ಅವರು ನನಗೆ ಆಪ್ತನಾಗಿದ್ದ ಕಾರಣ ನಾನು ಪ್ರಚಾರ ಮಾಡಿದೆ ಇದನ್ನೇ ದೊಡ್ಡ ವಿಷಯ ಮಾಡಿ ನಮ್ಮನ್ನು ಬೈಯ್ಯುವುದು ಸರಿಯಲ್ಲ. ಒಂದು ಪ್ರಚಾರ ಮಾಡಿದ ಕಾರ್ಯಕ್ಕೆ ನಮ್ಮನ್ನು ಇಷ್ಟು ಬಯ್ಯುತ್ತಿದ್ದಾರೆ ಎಂದರೆ ಅವರಿಗೆ ನಮ್ಮ ಮೇಲಿನ ಭಯ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ತಿಪ್ಪೇಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.    

short by Pawan / more at Troll haida

Comments