Skip to main content


ಕೈಯಲ್ಲಿ ಹೆಚ್ಚು ಚಿತ್ರವಿಲ್ಲದಿದ್ದರೂ, ಐಶಾರಾಮಿ ಜೀವನ ನಡೆಸುತ್ತಿರುವ ರೇಖಾ ಆರ್ಥಿಕ ಮೂಲ ಯಾವುದು ಗೊತ್ತಾ ?

ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ವರ್ಷಕ್ಕೆ ಕಡಿಮೆಯೆಂದರು 5 ರಿಂದ 6 ಚಿತ್ರಗಳಲ್ಲಿ ನಟಿಸುತ್ತಿದ್ದ ರೇಖಾ, 2015 ರಲ್ಲಿ ಬಿಡುಗಡೆಯಾದ ಶಮಿತಾಬ್ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಕಡಿಮೆ ಸಿನಿಮಾದಲ್ಲಿ ನಟಿಸುತ್ತಿದ್ದರೂ, ರೇಖಾ ಅವರ ಐಶಾರಾಮಿ ಜೀವನ ಶೈಲಿಗೇನು ಕೊರತೆಯಾಗಿಲ್ಲ. ಇಂದಿಗೂ ಅವರು ಐಶಾರಾಮಿ ಜೀವನವನ್ನೆ ನಡೆಸುತ್ತಿದಾರೆ.

ಒಂದು ಮೂಲಗಳ ಪ್ರಕಾರ, ನಟಿ ರೇಖಾ ಅವರ ಬಾಂದ್ರಾ ದಲ್ಲಿರುವ ಐಶಾರಾಮಿ ಬಂಗ್ಲೆಯ ಹೊರತುಪಡಿಸಿ, ರೇಖಾ ಅವರಿಗೆ ಮುಂಬೈನಲ್ಲಿ ಹಲವು ಆಸ್ತಿಗಳಿದ್ದು, ಇವುಗಳಿಂದ ಹೆಚ್ಚಿನ ಹಣ ರೇಖಾ ಅವರಿಗೆ ಹರಿದುಬರುತ್ತದೆ ಎನ್ನಲಾಗುತ್ತಿದೆ. ಹಲವು ರೀತಿಯ ಕಟ್ಟಡಗಳ ಒಡತಿಯಾಗಿರುವ ರೇಖಾಗೆ ಈ ಮೂಲಗಳಿಂದ ಹೆಚ್ಚಿನ ಹಣ ಹರಿದುಬರುತ್ತಿರುವುದರಿಂದ ಅವರ ಜೀವನ ಶೈಲಿ ಬದಲಾಗಿಲ್ಲ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ವರ್ಷಕ್ಕೆ ಕೆಲವೇ ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ಹೆಚ್ಚಿನ ಸಂಭಾವನೆ ನೀಡಲಾಗುವುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ರೇಖಾ ರಾಜ್ಯ ಸಭಾ ಸದಸ್ಯೆಯೂ ಹೌದು. ಇದರಿಂದಲೂ ಅವರಿಗೆ ವೇತನ ಲಭ್ಯವಿರುವುದರಿಂದ ರೇಖಾ ಅವರ ಆದಾಯ ಮೂಲಗಳು ಹೆಚ್ಚಿದೆ.         

short by Pawan / more at Balkani News

Comments